ಹಾರನಹಳ್ಳಿ (ಶಿವಮೊಗ್ಗ): ವೀರಣ್ಣನ ಬೆನವಳ್ಳಿ ಕ್ರಾಸ್ ಬಳಿ ಸೋಮವಾರ ಮಧ್ಯಾಹ್ನ ಕಾರು ಡಿಕ್ಕಿಯಾಗಿ ಹಾರನಹಳ್ಳಿಯ ವ್ಯಕ್ತಿ ಮೃತಪಟ್ಟ ಘಟನೆ ಸಂಬಂಧ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಹಾರನಹಳ್ಳಿಯ ತಿಪ್ಪೇಸ್ವಾಮಿ (75) ಅಪಘಾತದಲ್ಲಿ ಮೃತಪಟ್ಟಿದ್ದರು. (ಈ ಸುದ್ದಿಯನ್ನು ಇನ್ನು 41 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಕಾರು ಚಾಲಕನ ವಿರುದ್ಧ ಕೇಸ್ ಯಾಕೆ?
ತಿಪ್ಪೇಸ್ವಾಮಿ ಅವರು ಬ್ಯಾಂಕ್ ಕೆಲಸ ಮುಗಿಸಿಕೊಂಡು ತಮ್ಮ ಬೈಕ್ನಲ್ಲಿ ಹಿಂತಿರುಗುತ್ತಿದ್ದರು. ವೀರಣ್ಣನ ಬೆನವಳ್ಳಿ ಕ್ರಾಸ್ ಬಳಿ ತಮ್ಮ ಬೈಕ್ ಅನ್ನು ಬಲಕ್ಕೆ ತಿರುಗಿಸಲು ಸಿಗ್ನಲ್ ನೀಡುತ್ತಿದ್ದರು. ಈ ವೇಳೆ ಸಾಗರ ಕಡೆಯಿಂದ ವೇಗವಾಗಿ ಬಂದ ಎರ್ಟಿಗಾ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ತಿಪ್ಪೇಸ್ವಾಮಿ ಅವರು ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಬೈಕ್ ಸುಮಾರು 100 ಅಡಿ ದೂರಕ್ಕೆ ಹೋಗಿ ಬಿದ್ದಿತ್ತು. ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ನಾಮಫಲಕಕ್ಕೆ ಡಿಕ್ಕಿ ಹೊಡೆದು ನಿಂತಿತ್ತು. ಎರ್ಟಿಗಾ ಕಾರು ಚಾಲಕ ಅತಿ ವೇಗವಾಗಿ ಕಾರು ಚಲಾಯಿಸಿದ್ದೇ ಘಟನೆ ಕಾರಣ ಎಂದು ಆರೋಪಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.