ಹೊಸ ಮಿಷನ್‌ ಟ್ರಯಲ್‌ ವೇಳೆ ದುರಂತ, ಪೈಂಟರ್ ಸಾವು, ಹೇಗಾಯ್ತು ಘಟನೆ?

ಶಿವಮೊಗ್ಗ ಲೈವ್‌.ಕಾಂ | ಹೊಳೆಹೊನ್ನೂರು

ಗೋಡೆಗೆ ಲಪ್ಪಾ (ವಾಲ್‌ಕೇರ್ ಪುಟ್ಟಿ) ಉಜ್ಜುವ ಹೊಸ ಮಿಷನ್ ಅನ್ನು ಮನೆಯಲ್ಲಿ ಪರೀಕ್ಷಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪೈಂಟರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

painter-die-from-an-electric-shock-at-yedehalli

ಯಡೇಹಳ್ಳಿ ಗ್ರಾಮದ ನಿವಾಸಿ ಪೈಂಟರ್ ಶಾರುಖ್ ಖಾನ್ (26) ಮೃತ ದುರ್ದೈವಿ. ಶಿವಮೊಗ್ಗದಲ್ಲಿ ಹೊಸದಾಗಿ ಖರೀದಿಸಿ ತಂದಿದ್ದ ವಾಲ್‌ಕೇರ್ ಪುಟ್ಟಿ ಮಿಷನ್ ಅನ್ನು ಮಂಗಳವಾರ ತಮ್ಮ ಮನೆಯಲ್ಲಿ ಟ್ರಯಲ್ ನೋಡುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಆರೋಪಿಸಲಾಗಿದೆ.

ತೀವ್ರ ಅಸ್ವಸ್ಥಗೊಂಡಿದ್ದ ಶಾರುಖ್ ಖಾನ್ ಅವರನ್ನು ಕೂಡಲೇ ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ಕರೆತರಲಾಯಿತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಯಡೇಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪೈಂಟಿಂಗ್‌ ವೃತ್ತಿ ಮಾಡಿಕೊಂಡು ಶಾರೂಖ್‌ ಖಾನ್ ಅವರು ಜೀವನ ನಡೆಸುತ್ತಿದ್ದರು.‌ ಮೃತರಿಗೆ ಪತ್ನಿ, ಎರಡು ವರ್ಷದ ಹೆಣ್ಣು ಮಗು ಹಾಗೂ ಎರಡು ತಿಂಗಳ ಗಂಡು ಮಗುವಿದೆ.