ಅಡಿಕೆ ತುಂಬಿದ್ದ ಬೊಲೇರೊ ಪಿಕಪ್‌ ಪಲ್ಟಿ, ಮೂವರು ಸಾವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 15 JANUARY 2024

HOLEHONNURU : ಹಸಿ ಅಡಿಕೆ ತುಂಬಿದ್ದ ಬೊಲೇರೊ ಪಿಕಪ್‌ ವಾಹನ ಪಲ್ಟಿಯಾಗಿ ಮೂವರು ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿನ್ನಿಕಟ್ಟೆ ಜೋಗದ ಬಳಿಕ ಘಟನೆ ಸಂಭವಿಸಿದೆ.

ಭದ್ರಾವತಿ ತಾಲೂಕು ಚಂದನಕೆರೆಯ ಮಂಜುನಾಥ್‌ (40), ನಾಗರಾಜ್‌ (42) ಮತ್ತು ಗೌತಮ್‌ (18) ಮೃತಪಟ್ಟಿದ್ದಾರೆ.

ಅಪಘಾತ ಸಂಭವಿಸಿದ್ದು ಹೇಗೆ?

ಚಂದನಕೆರೆಯ ಅಡಿಕೆ ಖೇಣಿದಾರ ಬಸಪ್ಪ ಎಂಬುವವರು ಶಿಕಾರಿಪುರ ಸಮೀಪ ಅರಿಶಿನಗೆರೆ ಅಡಿಕೆ ತೋಟದಲ್ಲಿ ಅಡಿಕೆ ಕೊಯ್ಲು ಮಾಡಿಸಿದ್ದರು. ಇದಕ್ಕಾಗಿ ಏಳು ಮಂದಿ ತೆರಳಿದ್ದರು. ಕೊಯ್ಲು ಮುಗಿಸಿ ಚಂದನಕೆರೆಗೆ ಮರಳುತ್ತಿದ್ದಾಗ ಚಿನ್ನಿಕಟ್ಟೆ ಜೋಗದ ಬಳಿ ಚಾಲಕನ ನಿಯಂತ್ರಣ ತಪ್ಪಿ ಬೊಲೇರೋ ಪಿಕಪ್‌ ವಾಹನ ಪಲ್ಟಿಯಾಗಿದೆ.

ಇದನ್ನೂ ಓದಿ – ತುಂಗಾ ನದಿಯಲ್ಲಿ ಮುಳುಗಿದ್ದ ಯುವಕನ ಮೃತದೇಹ ಪತ್ತೆ

ಸ್ಥಳದಲ್ಲೆ ಇಬ್ಬರು, ಆಸ್ಪತ್ರೆಯಲ್ಲಿ ಒಬ್ಬರು ಸಾವು

ಮಂಜುನಾಥ್‌ ಮತ್ತು ನಾಗರಾಜ್‌ ಅವರು ಅಪಘಾತದ ಸ್ಥಳದಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಗೌತಮ್‌ನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ನಾಗರಾಜ್‌ ಮತ್ತು ಗೌತಮ್‌ ವರಸೆಯಲ್ಲಿ ಚಿಕ್ಕಪ್ಪ, ಮಗ ಆಗಬೇಕು.

ಇದನ್ನೂ ಓದಿ – ಶಿವಮೊಗ್ಗದ ರಿಂಗ್‌ ರಸ್ತೆಯಲ್ಲಿ ಬೈಕ್‌ ಸ್ಟಂಟ್‌, ಚಾಲಕನನ್ನು ಪತ್ತೆ ಹಚ್ಚಿ ಭಾರಿ ದಂಡ ಕಟ್ಟಿಸಿದ ಟ್ರಾಫಿಕ್‌ ಪೊಲೀಸ್‌

ಇನ್ನು, ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment