ಭದ್ರಾವತಿಯಲ್ಲಿ ಪೊಲೀಸ್‌ ದಾಳಿ, ಸೀಗೆಬಾಗಿಯ ಯುವಕ ಅರೆಸ್ಟ್‌, ಕಾರಣವೇನು?

ಭದ್ರಾವತಿ: ನಗರದ ಸತ್ಯಸಾಯಿನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ₹30,000 ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಭದ್ರಾವತಿ ಸೀಗೆಬಾಗಿಯ ನೇತಾಜಿ ರಸ್ತೆಯ ಅಜಗರ್ ಅಲಿ ಅಲಿಯಾಸ್ ರಾಯಿಲ್ (32) ಬಂಧಿತ. ಸತ್ಯಸಾಯಿನಗರದಲ್ಲಿ ಮಾದಕ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಆಧರಿಸಿ, ಪಿಎಸ್‌ಐ ಭಾರತಿ ಎಸ್.ಎನ್. ಅವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ಆರೋಪಿಯಿಂದ ₹30,000 ಮೌಲ್ಯದ 600 ಗ್ರಾಂ ತೂಕದ ಗಾಂಜಾ ವಸಕ್ಕೆ ಪಡೆಯಲಾಗಿದೆ. ಈ ಕುರಿತು ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Bhadravathi-Hosamane-police-arrest-one-person