ಶಿವಮೊಗ್ಗ ಲೈವ್
ಸಾಗರ: ವಿದ್ಯುತ್ ಅವಘಡದಿಂದಾಗಿ 13ಕ್ಕೂ ಹೆಚ್ಚು ಮನೆಗಳ ವಿದ್ಯುತ್ ಯಂತ್ರೋಪಕರಣ ಹಾನಿಯಾಗಿವೆ. ಸಾಗರದ ಇಕ್ಕೇರಿ ರಸ್ತೆಯ ಗ್ಯಾಸ್ ಗೋದಾಮು ಬಳಿ ಘಟನೆ ಸಂಭವಿಸಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್.ಕಾಂ ವೆಬ್ಸೈಟ್ನಲ್ಲಿ. ಈ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ವಿದ್ಯುತ್ ತಂತಿಗಳಲ್ಲಿ ಏಕಾಏಕಿ ಹೆಚ್ಚಿನ ಪ್ರಮಾಣದ ವಿದ್ಯುತ್ ಹರಿದ ಕಾರಣ ಬಡಾವಣೆಯಲ್ಲಿ ಭಾರೀ ಶಬ್ದ ಕೇಳಿಸಿದ್ದು ಮನೆಯೊಳಗಿನ ಟಿ.ವಿ, ರೆಫ್ರಿಜರೇಟರ್, ಮಿಕ್ಸರ್, ಗ್ರೈಂಡರ್, ನೀರೆತ್ತುವ ಮೋಟಾರು ಪಂಪ್, ಮೀಟರ್ ಬೋರ್ಡ್ ಸೇರಿ ಹಲವು ಉಪಕರಣಗಳು ಸುಟ್ಟು ಹೋಗಿವೆ.

ಈ ಹಿಂದೆಯೂ ಇಲ್ಲಿ ಇದೇ ರೀತಿ ಅವಘಡ ಸಂಭವಿಸಿ ಹಾನಿ ಉಂಟಾಗಿತ್ತು. ಇದನ್ನು ತಪ್ಪಿಸಲು ಮೆಸ್ಕಾಂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಮೆಸ್ಕಾಂ ಎಂಜಿನಿಯರ್, ಸಿಬ್ಬಂದಿ ಭೇಟಿ ನೀಡಿದ್ದರು.