ಭದ್ರಾವತಿ ಪೊಲೀಸರ ಕಾರ್ಯಾಚರಣೆ, ಕೆಲವೇ ಗಂಟೆಯಲ್ಲಿ ಹರಿಹರದ ವ್ಯಕ್ತಿ ಅರೆಸ್ಟ್‌, ಆಗಿದ್ದೇನು?

 ಶಿವಮೊಗ್ಗ  LIVE 

ಭದ್ರಾವತಿ: ಮನೆ ಮುಂದೆ ಕೆಲಸ ಮಾಡುತ್ತಿದ್ದ ಗೃಹಿಣಿಗೆ ಚಾಕು ತೋರಿಸಿ ಬೆದರಿಸಿ, ಮಾಂಗಲ್ಯ ಸರ ದೋಚಿದ್ದ (chain snatcher) ಆರೋಪಿಯನ್ನು ಭದ್ರಾವತಿ ನ್ಯೂ ಟೌನ್ ಪೊಲೀಸರು ಕೆಲವೇ ಗಂಟೆಯಲ್ಲಿ ಬಂಧಿಸಿದ್ದಾರೆ.

ಸೋಮವಾರ ಬೆಳಗ್ಗೆ ಭದ್ರಾವತಿಯ ಜೇಡಿಕಟ್ಟೆ ನಿವಾಸಿ ಭಾಗ್ಯ ಅವರು ಮನೆಯ ಬಾಗಿಲು ತೊಳೆಯಲು ನೀರು ತೆಗೆದುಕೊಳ್ಳಲು ಹೋಗಿದ್ದರು. ದುಷ್ಕರ್ಮಿಯೊಬ್ಬರ ಚಾಕು ಹಿಡಿದು ಬಂದು ಭಾಗ್ಯ ಅವರಿಗೆ ಜೀವ ಬೆದರಿಕೆ ಹಾಕಿದ್ದ. ₹1.50 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ.

ಕೆಲವೇ ಗಂಟೆ ಅರೆಸ್ಟ್‌

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

Harihara-person-arrested-at-Bhadravathi

ಇದನ್ನೂ ಓದಿ » ಭದ್ರಾವತಿಯ ಮಹಿಳೆ ಸೇರಿ ಇಬ್ಬರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ, ₹40,000 ದಂಡ, ಏನಿದು ಕೇಸ್‌?

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಸಪಾಳ್ಯ ನಿವಾಸಿ ಪ್ರತಾಪ್.ಬಿ (25) ಬಂಧಿತ. ಕೃತ್ಯಕ್ಕೆ ಬಳಸಿದ ಒಂದು ಚಾಕು. ಸುಮಾರು ₹75,000 ಮೌಲ್ಯದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್, ₹75,000 ಮೌಲ್ಯದ ಚಿನ್ನದ ತಾಳಿ ಸರ ಸೇರಿ ಅಂದಾಜು ₹1,50,000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ನ್ಯೂಟೌನ್ ಪೊಲೀಸ್ ಠಾಣೆ ಪಿಎಸ್‌ಐ ಟಿ. ರಮೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಪಿಎಸ್‌ಐ ಕವಿತಾ, ಎಎಸ್‌ಐ ಟಿ.ಪಿ.ಮಂಜಪ್ಪ, ಸಿಬ್ಬಂದಿ ಆದರ್ಶ, ರವಿಕಿರಣ್ ಬಿ.ಪಿ, ಪ್ರಸನ್ನ, ಪ್ರಕಾಶ.ಜಿ.ಕೆ ಅವರಿದ್ದ ತಂಡ ಕಾರ್ಯಾಚರಣೆ ನಡೆಸಿತು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment