ಭದ್ರಾ ನಾಲೆಗೆ ಹಾರಿ ಗೃಹಿಣಿ ಆತ್ಮಹತ್ಯೆ ಕೇಸ್‌, ಪಾಂಡಿಚೇರಿಯಲ್ಲಿ ಪತಿ ಅರೆಸ್ಟ್‌

 ಶಿವಮೊಗ್ಗ  LIVE 

ಹೊಳೆಹೊನ್ನೂರು: ಪತ್ನಿ ಸಾವು ಪ್ರಕರಣದಲ್ಲಿ ಆರೋಪಿ ಗುರುರಾಜ್‌ನನ್ನು ಪಾಂಡಿಚೇರಿಯಲ್ಲಿ ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ (Arrest).

ನವೆಂಬರ್‌ 25ರಂದು ಪತಿಯ ಮನೆಯವರ ಕಿರುಕುಳ ತಾಳಲಾರದೆ ಡಿ.ಬಿ.ಹಳ್ಳಿಯ ನವವಿವಾಹಿತೆ ಲತಾ, ಹಂಚಿನಸಿದ್ದಾಪುರ ಬಳಿ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಎರಡು ದಿನದ ನಂತರ ಚನ್ನಗಿರಿ ತಾಲೂಕಿನ ಕಣಿವೆಬಿಳಚಿ ಗ್ರಾಮದ ಭದ್ರಾ ನಾಲೆಯಲ್ಲಿ ಶವ ಸಿಕ್ಕಿತ್ತು.

ಕಳೆದ ವರ್ಷ ಏಪ್ರಿಲ್‌ನಲ್ಲಿ ಶಿಕಾರಿಪುರದ ಗುರುರಾಜ್‌ನನ್ನು ಲತಾ ವಿವಾಹವಾಗಿದ್ದರು. ಭದ್ರಾವತಿ ತಾಲೂಕಿನ ಡಿ.ಬಿ ಹಳ್ಳಿಯ ಪರಮೇಶ್ವರಪ್ಪ ಮತ್ತು ರುದ್ರಮ್ಮ ದಂಪತಿಯ ಪುತ್ರಿ ಲತಾ ಮದುವೆಯಾದ ಏಳು ತಿಂಗಳಲ್ಲಿ ಗಂಡನ ಮನೆಯವರಿಂದ ಹಿಂಸೆ ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ಬಳಿಕ ಪತಿ ಗುರುರಾಜ್ ತಲೆಮರೆಸಿಕೊಂಡಿದ್ದ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment