ಭದ್ರಾವತಿಯ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಭದ್ರಾವತಿ: ವಿದ್ಯುತ್‌ ಮಾರ್ಗ ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಆಗಸ್ಟ್ 11ರಂದು ಬೆಳಿಗ್ಗೆ 10ರಿಂದ ಸಂಜೆ 6ರ ಗಂಟೆವರೆಗೆ ಭದ್ರಾವತಿಯ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಲ್ಲೆಲ್ಲಿ ಕರೆಂಟ್‌ ಇರಲ್ಲ?

ಬಿ.ಹೆಚ್.ರಸ್ತೆ, ಚಾಮೇಗೌಡ ಬೀದಿ, ಹಾಲಪ್ಪವೃತ್ತ, ಲೋಯರ್ ಹುತ್ತಾ, ಮೀನುಗಾರರ ಬೀದಿ, ಗೌಳಿಗರ ಬೀದಿ, ಸಹ್ಯಾದ್ರಿ ಬಡಾವಣೆ, ದೊಣಬಘಟ್ಟ, ತಡಸ, ಬಿಳಕಿ, ಬಿಳಕಿ ತಾಂಡ, ಪದ್ಮನಹಳ್ಳಿ, ಹೊಳೆನೇರಳೆಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

power cut mescom ELECTRICITY