ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 19 JANUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
BHADRAVATHI : ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಭದ್ರಾವತಿಯ ಮೈಕ್ರೋ ಆರ್ಟಿಸ್ಟ್ ವರುಣ್ ಆಚಾರ್ ಪೆನ್ಸಿಲ್ ಲೆಡ್‌ನಲ್ಲಿ ರಾಮ ಮಂದಿರದ ಮಾದರಿ ನಿರ್ಮಿಸಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಪೆನ್ಸಿಲ್ ಲೆಡ್‌ನಲ್ಲಿ ನಿರ್ಮಿಸಿರುವ ರಾಮ ಮಂದಿರದ ಮಾದರಿಯು 1 ಸೆಂಟಿ ಮೀಟರ್‌ನಷ್ಟಿದೆ. ರಾಮ ಮಂದಿರದ ಗೋಪುರಗಳು, ಮೇಲೆ ಕೇಸರಿ ಧ್ವಜವಿದೆ. ಅತ್ಯಂತ ಸೂಕ್ಷ್ಮವಾಗಿ, ಸ್ಪಷ್ಟವಾಗಿ ಮಾದರಿಯನ್ನು ನಿರ್ಮಿಸಿದ್ದಾರೆ.
ರಾಮ ಮಂದಿರ 0.9 ಸೆಂಟಿ ಮೀಟರ್ ಇದೆ. ಧ್ವಜ ಸೇರಿದರೆ 1 ಸೆಂಟಿ ಮೀಟರ್‌ನಷ್ಟಾಗಲಿದೆ. ಇದನ್ನು ನಿರ್ಮಿಸಲು ಸುಮಾರು 4 ಗಂಟೆ ಸಮಯ ಹಿಡಿಯಿತು. ಈ ಹಿಂದೆ ರಾಮ ಮಂದಿರದ ತೀರ್ಪು ಪ್ರಕಟವಾದಾಗ ಪೆನ್ಸಿಲ್ ಲೆಡ್‌ನಲ್ಲಿ ರಾಮ ಮಂದಿರದ ಮಾದರಿ ನಿರ್ಮಿಸಿದ್ದೆ. ಅದು 1.9 ಸೆಂಟಿ ಮೀಟರ್‌ನಷ್ಟಿತ್ತು.ವರುಣ್ ಆಚಾರ್, ಮೈಕ್ರೋ ಆರ್ಟಿಸ್ಟ್
ಭದ್ರಾವತಿ ಓಲ್ಡ್ ಟೌನ್ ನಿವಾಸಿ ವರುಣ್ ಆಚಾರ್ ಸಹಕಾರ ಬ್ಯಾಂಕ್ ಒಂದರ ಉದ್ಯೋಗಿ. ಈ ಹಿಂದೆ ಹಲವು ಸಂದರ್ಭದಲ್ಲಿ ಪೆನ್ಸಿಲ್ ಲೆಡ್, ಅಕ್ಕಿ ಕಾಳುಗಳಲ್ಲಿ ಮೈಕ್ರೋ ಆರ್ಟ್ ನಿರ್ಮಿಸಿದ್ದರು. ಕ್ರಿಕೆಟ್ ವಿಶ್ವಕಪ್ ಸಂದರ್ಭ ಪೆನ್ಸಿಲ್ ಲೆಡ್‌ನಲ್ಲಿ ನಿರ್ಮಿಸಿದ್ದ ವಿಶ್ವಕಪ್ ಮಾದರಿ, ಗಣಪತಿ, ಬುದ್ಧ, ರಾಘವೇಂದ್ರ ಸ್ವಾಮಿ, ಚಾಮುಂಡೇಶ್ವರಿ, ರಾಜ್ಯೋತ್ಸವದಂದು ಕನ್ನಡ ಅಕ್ಷರದ ಆರ್ಟ್ ಸೇರಿದಂತೆ ವಿವಿಧ ಮಾದರಿಗಳನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ – ಇನ್ಮುಂದೆ ಶಿವಮೊಗ್ಗದ ಫ್ರೀಡಂ ಪಾರ್ಕ್‌ಗೆ ಹೊಸ ಹೆಸರು, ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
ಮೈಕ್ರೋ ಆರ್ಟ್ ಕಲಿಕೆಗಾಗಿ ವಿಶೇಷ ತರಬೇತಿ ಪಡೆದಿಲ್ಲ. ಆಸಕ್ತಿ ಮತ್ತು ಕುತೂಹಲದಿಂದಾಗಿ ಕಲಿತುಕೊಂಡೆ. ಈಗ ವಿವಿಧ ಮಾದರಿಗಳನ್ನು ನಿರ್ಮಿಸುತ್ತಿದ್ದೇನೆ ಅನ್ನುತ್ತಾರೆ ವರುಣ್ ಆಚಾರ್.