ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 APRIL 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
HOLEHONNURU : ಭದ್ರಾ ನಾಲೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಸಮೀಪದ ಗುಡುಮಗಟ್ಟೆಯಲ್ಲಿ ಘಟನೆ ಸಂಭವಿಸಿದೆ. ಆನವೇರಿಯ ಉಮೇಶ್ ಶೆಟ್ಟಿ ಅವರ ಮಗ ರಜತ್ (10) ಮತ್ತು ಕುಂದಾಪುರದ ತೆಕ್ಕಟ್ಟೆ ನಿವಾಸಿ ನವೀನ್ ಶೆಟ್ಟಿ ಅವರ ಮಗ ರೋಹನ್ (15) ಮೃತ ದುರ್ದೈವಿಗಳು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಆಟವಾಡಲು ಹೋಗಿ ನೀರುಪಾಲದ ಮಕ್ಕಳು
ರಜತ್ ಮತ್ತು ರೋಹನ್ ನೀರಿನಲ್ಲಿ ಆಟವಾಡಲು ಭದ್ರಾ ನಾಲೆ ಬಳಿ ಹೋಗಿದ್ದರು. ಈ ವೇಳೆ ಆಯಾತಪ್ಪಿ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ ಎಂದು ಶಂಕಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮಕ್ಕಳಿಗೆ ಶೋಧ ಕಾರ್ಯ ನಡೆಸಿದರು. ಗುಡುಮಗಟ್ಟೆ ಸೇತುವೆ ಬಳಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ರಜೆ ಕಳೆಯಲು ಕುಂದಾಪುರದಿಂದ ಬಂದಿದ್ದ
ಮೂಲತಃ ಕುಂದಾಪುರದ ಉಮೇಶ್ ಶೆಟ್ಟಿ ಆನವೇರಿಯಲಿ ಹೊಟೇಲ್ ನಡೆಸುತ್ತಿದ್ದಾರೆ. ಇವರ ಮಗ ರಜತ್ ನಾಲ್ಕನೆ ತರಗತಿ ಓದುತ್ತಿದ್ದ. ಸಂಬಂಧಿ ನವೀನ್ ಶೆಟ್ಟಿ ಅವರ ಮಗ ರೋಹನ್ ಕುಂದಾಪುರದಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ. ರಜೆ ಹಿನ್ನೆಲೆ ರೋಹನ್ ಆನವೇರಿಗೆ ಬಂದಿದ್ದ. ನೀರಿನಲ್ಲಿ ಆಟವಾಡಲು ಇಬ್ಬರು ಭದ್ರಾ ನಾಲೆ ಬಳಿ ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕುಂದಾಪುರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಭದ್ರಾವತಿಯಲ್ಲಿ ಪೊಲೀಸ್ ರೇಡ್, ಮಹಿಳೆ ಅರೆಸ್ಟ್, ಲಕ್ಷ ಲಕ್ಷದ ಮಾದಕ ವಸ್ತು ಸೀಜ್