ಅಪ್ಪಾಜಿಗೌಡ ಶ್ರದ್ಧಾಂಜಲಿ ಸಭೆ, ಸರ್ವ ಧರ್ಮದ ಗುರುಗಳು ಭಾಗಿ, ಯಾರೆಲ್ಲ ಏನೆಲ್ಲ ಹೇಳಿದರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 ಸೆಪ್ಟಂಬರ್ 2020

ಭದ್ರಾವತಿಯಲ್ಲಿ ಮಾಜಿ ಶಾಸಕ  ಎಂ.ಜೆ.ಅಪ್ಪಾಜಿಗೌಡ ಅವರ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಸರ್ವಧರ್ಮದ ಗುರುಗಳು ಸಭೆಯಲ್ಲಿ ಭಾಗವಹಿಸಿದ್ದರು. ಅಪ್ಪಾಜಿಗೌಡ ಅವರ ಕುರಿತು ಮಾತನಾಡಿದರು.

ಶ್ರೀ ಪ್ರಸನ್ನನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ : ಆರೋಗ್ಯ ನೋಡಿಕೊಳ್ಳಿ ಎಂದು ಹೇಳುತ್ತಿದ್ದೆ. ಜನ ಸೇವೆಯಲ್ಲಿರುವವರು ಆರೋಗ್ಯದ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಿರಲು ಆಗುವುದಿಲ್ಲ. ನಾಲ್ಕು ಜನಕ್ಕೆ ಒಳ್ಳೆಯದಾದರೆ ಸಾಕು ಎಂದು ಹೇಳುತ್ತಿದ್ದರು. ಮಾಜಿ ಪ್ರಧಾನಿ ಹೆಚ್‍.ಡಿ.ದೇವೇಗೌಡರು ಹಾಗೆ ಬದುಕಿದ್ದಾರೆ ಅಂತಾ ಹಲವು ಬಾರಿ ನಮ್ಮ ಬಳಿ ಹೇಳಿದ್ದಾರೆ. ಮೂರು ಬಾರಿ ಶಾಸಕರಾಗಿದ್ದರು. ಆದರೆ ಯಾವುದೇ ಸ್ಥಾನಮಾನ ಪಡೆಯಲಿಲ್ಲ. ಸ್ಥಾನಮಾನದ ವಿಚಾರದಲ್ಲಿ ಮಾತಾಡಿದರೆ ಸ್ಥಾನ ಬೇಕಿಲ್ಲ. ಜನರ ಮಧ್ಯೆ ಇದ್ದರೆ ಸಾಕು ಅನ್ನುತ್ತಿದ್ದರು.

ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಬಸವ ಕೇಂದ್ರ, ಶಿವಮೊಗ್ಗ  :ಮನುವಷ್ಯ ಹೇಗೆ ಬದುಕಬೇಕು ಅಂದರೆ, ಮಂದಿ ಮಕ್ಕಳ ಜೊತೆಗೆ ಚನ್ನಾಗಿ ಇರಬೇಕು. ನಂದಿಯ  ಮೇಲೆ ಶಿವ ಬಂದು ಕರೆದಾಗ ಮಂದಿ ಬಾಯಲ್ಲಿ ಇರಬೇಕು ಅಂತಾ ನಮ್ಮ ಜಾನಪದವರು ಹೇಳ್ತಾರೆ. ಕರೋನದಂತಹ ಕಾಲದಲ್ಲೂ ಅಪ್ಪಾಜಿಗೌಡರಿಗಾಗಿ ಇಷ್ಟೊಂದು ಜನ ಸೇರಿರುವುದು ಗಮನಿಸಿದಾಗ ಅಪ್ಪಾಜಿಗೌಡರು ಹೇಗೆ ಬದುಕಿದ್ದರು ಎಂದು ತೋರಿಸುತ್ತಿದೆ.  ಮನುಷ್ಯನ ಬದುಕು ಸಾರ್ಥಕವಾಗುವುದು ಎಷ್ಟು ವರ್ಷ ಬದುಕಿದ ಅಂತಲ್ಲ. ಹೇಗೆ ಬದುಕಿದ ಅಂತಾ.

ಶ್ರೀ ಬಸವನಾಗಿ ಶರಣರು, ಛಲವಾದಿ ಜಗದ್ಗುರು ಪೀಠ, ಚಿತ್ರದುರ್ಗ : ಪ್ರತಿ ಹಳ್ಳಿಯಲ್ಲೂ ಎಂ.ಜೆ.ಅಪ್ಪಾಜಿ ಗೌಡ ಅವರ ಭಾವಚಿತ್ರವನ್ನು ಕಂಡಿದ್ದೇನೆ. ಎಲ್ಲೆಲ್ಲೂ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಇದರು ಅವರು ಜನಪರವಾಗಿರುವುದಕ್ಕೆ ಸಾಕ್ಷಿಯಾಗಿದೆ. ಬಡವರ ಕಷ್ಟವನ್ನು ಸ್ವತಃ ಅನುಭವಿಸಿ ಶಾಸಕರಾಗಿದ್ದರು. ಅದಕ್ಕಾಗಿ ಜನಮುಖಿಯಾಗಿ, ಮತದಾರರನ್ನು ಒಡಹುಟ್ಟಿದವರಂತೆ ಬಾಂಧವ್ಯದಿಂದ ಕಂಡಿದ್ದರು.

ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಬಂಜಾರ ಪೀಠ : ಅಪ್ಪಾಜಿಗೌಡರನ್ನು ನಾವು ಬಂಡೆಗೆ ಹೋಲಿಸುತ್ತಿದ್ದೆವು. ಕಾರ್ಮಿಕರಾಗಿ ಕೆಲಸ ಮಾಡಿ, ನೋವು, ದುಃಖದಲ್ಲಿರುವವರನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದರು. ಶಾಸಕರಾಗಿ ಇರದೆ ಸೇವನಂತೆ ಇದ್ದರು. ಅವರ ಹೆಸರು, ಸೇವಾ ಮನೋಭವವನ್ನು ಅವರ ಕುಟುಂಬ ಮುಂದುವರೆಸಿಕೊಂಡು ಹೋಗಲು ಶಕ್ತಿಯನ್ನು ದೇವರು ನೀಡಬೇಕಿದೆ.

ಮೌಲಾನ ಶಾ ಉಲ್ ಹಮೀದ್, ದಾರುಲ್ ಹಸನ್ ಮದರಸಾದ ಪ್ರಾಂಶುಪಾಲರು : ಭದ್ರಾವತಿಯಲ್ಲಿ ಜನಮನಸುಗಳಲ್ಲಿ ಒಮ್ಮೆಯು ಸಹ ಮರೆಮಾಚಲಾಗದ ವ್ಯಕ್ತಿತ್ವ. ಈ ಮಾತು ವೇದಿಕೆ, ಭಾಷಣ, ಬರಹಕ್ಕೆ ಸೀಮಿತವಲ್ಲ. ಅವರು ನಿಜವಾಗಿಯು ಸಾಧಿಸಿ ತೋರಿಸಿದ್ದರು. ಜಾತಿ, ಧರ್ಮ, ಮೇಲು, ಕೀಳು, ವರ್ಣಗಳನ್ನು ನೋಡದೆ ಸದಾ ಜನರೊಂದಿಗೆ ಬೆರೆತಿದ್ದರು.

ಶ್ರೀ ಲಕ್ಷ್ಮಣಾಚಾರ್ಯ ಸ್ವಾಮೀಜಿ, ಅಚಲ ಸದ್ಗುರು ಆಶ್ರಮ, ಭದ್ರಾವತಿ : ಬಸ್ ನಿಲ್ದಾಣವಿರಲಿಲ್ಲ ಭದ್ರಾವತಿಯಲ್ಲಿ. ಅದನ್ನು ನಿರ್ಮಿಸಿದರು ಅಪ್ಪಾಜಿ. ಸೇತುವೆ, ಪ್ರತಿ ಹಳ್ಳಿಗೆ ಸಿಮೆಂಟ್‍ ರಸ್ತೆ, ಬೀದಿ ಬೀದಿಯಲ್ಲೂ ಆರ್ಚ್, ಬಸ್ ನಿಲ್ದಾಣಗಳನ್ನು ನಿರ್ಮಿಸಿದರು. ಜಾತಿ ಬೇಧವಿಲ್ಲದೆ ಸಮಾನವಾಗಿ ಕಂಡರು.

ರೆವರೆಂಡ್ ಜಿ.ಸ್ಟಾನ್ಲಿ, ಫಾದರ್ : ಅಪ್ಪಾಜಿಗೌಡರು ಪ್ರತಿಯೊಬ್ಬರಲ್ಲು ದೇವರನ್ನು ಕಂಡರು. ಮಾತು ಜೋರಿದೆ. ಹೃದಯ ಮೃದು. ಭದ್ರಾವತಿಯಲ್ಲಿ ಇರುವುದು ಮೂರು ಚರ್ಚ್‍ಗಳು. ಅಪ್ಪಾಜಿಗೌಡರ ಕಾರಣದಿಂದ ಚರ್ಚುಗಳು ಅಭಿವೃದ್ಧಿಯಾಗಿದೆ. ದೇವರು ಇಂತಹವರನ್ನು ಮತ್ತೆ ಭದ್ರಾವತಿಲ್ಲಿ ಹುಟ್ಟಿಸಲಿ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 13, 2020

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?‌ –  27 ಮಾರ್ಚ್‌ 2026

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?‌ –  27 ಮಾರ್ಚ್‌ 2026

ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್‌ ಜಾಮ್

ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್‌ ಜಾಮ್

ಕುಟುಂಬದ ಜೊತೆ ಊಟ ಮುಗಿಸಿ, ಮಾತನಾಡಿ ಮಲಗಲು ತೆರಳಿದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕುಟುಂಬದ ಜೊತೆ ಊಟ ಮುಗಿಸಿ, ಮಾತನಾಡಿ ಮಲಗಲು ತೆರಳಿದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಶಿವಮೊಗ್ಗದಲ್ಲಿ ಶ್ರೀಕಾಂತಣ್ಣ ಕಪ್‌ ಕ್ರಿಕೆಟ್‌ ಪಂದ್ಯಾವಳಿ, ಟ್ರೋಫಿ, ಟೀ ಶರ್ಟ್‌ಗಳ ಅನಾವರಣ

ಶಿವಮೊಗ್ಗದಲ್ಲಿ ಶ್ರೀಕಾಂತಣ್ಣ ಕಪ್‌ ಕ್ರಿಕೆಟ್‌ ಪಂದ್ಯಾವಳಿ, ಟ್ರೋಫಿ, ಟೀ ಶರ್ಟ್‌ಗಳ ಅನಾವರಣ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

Leave a Comment