ಶಿವಮೊಗ್ಗ: ಭದ್ರಾವತಿ – ಮಸರಹಳ್ಳಿ ರೈಲ್ವೆ ನಿಲ್ದಾಣದ ಮಧ್ಯೆ ಹಳಿ (Track) ಮೇಲೆ ಸೋಮವಾರ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಸುಮಾರು 45 ವರ್ಷದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ರೈಲ್ವೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಮೃತನು 5.4 ಅಡಿ ಎತ್ತರ, ಸಾದಾರಣ ಮೈಕಟ್ಟು, ಗೋದಿ ಮೈ ಬಣ್ಣ, ಕಪ್ಪು ಬಣ್ಣದ 2 ಇಂಚು ಉದ್ದದ ತಲೆ ಕೂದಲು, ಅರ್ಧ ಇಂಚು ಕಪ್ಪು ಗಡ್ಡ, ಮೀಸೆ, ಬಲಗೈನಲ್ಲಿ ಹೂವಿನ ತರಹ ಕಾಣುವ ಹಚ್ಚೆ ಇರುತ್ತದೆ. ಮೃತ ವ್ಯಕ್ತಿಯು ನೀಲಿ ಬಣ್ಣದ ಪ್ಯಾಂಟ್, ಪಾಚಿ ಹಸಿರು ಕಪ್ಪು ಗ್ರೇ ಕಲರ್ ತುಂಬು ತೋಳಿನ ಶರ್ಟ್ ಧರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ ದೂ.ಸಂ. 08182-222974 ಮೊ.ಸಂ.948082124 ಸಂಪರ್ಕಿಸುವಂತೆ ಶಿವಮೊಗ್ಗ ರೈಲ್ವೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ » ಆಪರೇಷನ್ ಸಿಂಧೂರ, ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಯೋಧನ ಕುಟುಂಬಕ್ಕೆ ಅದ್ಧೂರಿ ಸ್ವಾಗತ, ಹೇಗಿತ್ತು? ಯಾರೆಲ್ಲ ಇದ್ದರು?

LATEST NEWS
- ಉಪನ್ಯಾಸಕಿಗೆ ವಿಡಿಯೋ ಕರೆ ಮಾಡಿ ಅಶ್ಲೀಲ ವರ್ತನೆ, ದಾಖಲಾಯ್ತು ಕೇಸ್, ಏನಿದು ಪ್ರಕರಣ?

- ಕಪ್ಪು ಪ್ಯಾಕೆಟ್ ಕೇಸ್, ಮೂವರು ಅರೆಸ್ಟ್, ಏನಿದು ಪ್ರಕರಣ? ಯಾರಿವರು ಬಂಧಿತರು?

- ಅರ್ಜಿಗಳನ್ನು ಪೂರ್ತಿಗೊಳಿಸಲು ಫೆಬ್ರವರಿ 12ರವರೆಗೆ ಅವಕಾಶ, ಇಲ್ಲಿದೆ ಕಂಪ್ಲೀಟ್ ಮಾಹಿತಿ

- ಸೋಗಾನೆಯಲ್ಲಿ ಧಗಧಗ ಹೊತ್ತಿ ಉರಿದ ತೊಗರಿ, ಹುರುಳಿಯ ಬೊಣವೆ, ಆಗಿದ್ದೇನು?

- ಕಾರು, ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ನೆರವಾದ ಶಿವಮೊಗ್ಗ ಜಿಲ್ಲಾಧಿಕಾರಿ, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು







