SHIVAMOGGA LIVE | 1 AUGUST 2023
BHADRAVATHI : ವಿಐಎಸ್‌ಎಲ್ ಕಾರ್ಖಾನೆಯಲ್ಲಿ (VISL) ಉತ್ಪಾದನಾ ಚಟುವಟಿಕೆ ಪುನಾರಂಭಕ್ಕೆ ಸೇಲ್ ಆಡಳಿತ ಮಂಡಳಿ ಅನುಮತಿ ನೀಡಿದೆ. ಆ.10ರಿಂದ ಬಾರ್ ಮಿಲ್ ಕೆಲಸ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ನಿರ್ದೇಶನದ ಬಳಿಕ ಸೇಲ್ ಆಡಳಿತ ಮಂಡಳಿ ವಿಐಎಸ್‌ಎಲ್ (VISL) ಕಾರ್ಖಾನೆಯಲ್ಲಿ ಉತ್ಪಾದನಾ ಚುಟವಟಿಕೆ ಪುನಾರಂಭ ಮಾಡಲು ಮುಂದಾಗಿದೆ. ಆ.10ರಿಂದ ಬಾರ್ ಮಿಲ್‌ನಲ್ಲಿ ಉತ್ಪಾದನೆ ಶುರುವಾಗಲಿದೆ. ಮುಂದೆ ಪ್ರಾಥಮಿಕ ಗಿರಣಿ ಪುನರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ – VISL ಕಾರ್ಮಿಕರ ಜೊತೆ ಸಂಸದ ರಾಘವೇಂದ್ರ ಮಹತ್ವದ ಮೀಟಿಂಗ್, ಏನೆಲ್ಲ ಹೇಳಿದರು?
ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಈತನಕ ತಾಳ್ಮೆಯಿಂದ ಸಹಕರಿಸಿದ ವಿಐಎಸ್‌ಎಲ್ ನೌಕರರು, ಕಾರ್ಮಿಕ ಸಂಘಟನೆ ಮುಖಂಡರು, ಜನಪ್ರತಿನಿಧಿಗಳಿಗೆ ಸಂಸದ ರಾಘವೇಂದ್ರ ಧನ್ಯವಾದ ತಿಳಿಸಿ ಪ್ರಕಟಣೆ ಹೊರಡಿಸಿದ್ದಾರೆ.
.jpeg)