ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
ಹೊಸನಗರ: ರಾಷ್ಟ್ರೀಯ ಹೆದ್ದಾರಿಯ ಬೃಹತ್ ಗುಂಡಿಗಳನ್ನು (Pot Holes) ಮುಚ್ಚದ ಸರ್ಕಾರದ ನಡೆ ಖಂಡಿಸಿ ನಗರದಲ್ಲಿ ಮತ್ತಿಮನೆ ಶ್ರೀಕಾಂತ್ ಎಂಬುವವರು ವಿಭಿನ್ನ ಪ್ರತಿಭಟಿನೆ ಆರಂಭಿಸಿದ್ದಾರೆ. ಪ್ರತಿ ಗುಂಡಿಯಲ್ಲಿ ಅಡಿಕೆ ಸಸಿಗಳನ್ನು ನೆಟ್ಟು ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
ರಾಣೆಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಹೊಸನಗರ – ನಗರ ಮಾರ್ಗದಲ್ಲಿ ಭಾರಿ ಗಾತ್ರದ ಗುಂಡಿಗಳಾಗಿವೆ. ಇವುಗಳಿಂದ ನಿತ್ಯ ಒಂದಿಲ್ಲೊಂದು ಅಪಘಾತವಾಗುತ್ತಿವೆ. ಹಲವರು ಬಿದ್ದು ಗಾಯಗೊಂಡಿದ್ದಾರೆ. ಹಾಗಾಗಿ ಸರ್ಕಾರದ ಗಮನ ಸೆಳೆಯಲು ಮತ್ತಿಮನೆ ಶ್ರೀಕಾಂತ್ ಗುಂಡಿ ಮುಚ್ಚಿ, ಅಡಿಕೆ ಸಸಿ ನೆಡುವ ಪ್ರತಿಭಟನೆ ಮಾಡುತ್ತಿದ್ದಾರೆ.
ವಾರದ ಹಿಂದೆ ಬಿದ್ದು ಗಾಯಗೊಂಡಿದ್ದರು
ಈ ಕುರಿತು ಮಾತನಾಡಿದ ಮತ್ತಿಮನೆ ಶ್ರೀಕಾಂತ್, ‘ಸರ್ಕಾರದ ಗಮನ ಸೆಳೆಯಲು ಪ್ರತಿ ಗುಂಡಿಯನ್ನು ಮುಚ್ಚಿ ಅದರಲ್ಲಿ ಅಡಿಕೆ ಸಸಿ ನೆಡುತ್ತಿದ್ದೇನೆ. ಹೊಸನಗರ – ನಗರ ಮಧ್ಯೆ 16 ಕಿ.ಮೀ ರಸ್ತೆಯಲ್ಲಿ ಆಳ, ಅಗಲವಾದ ಗುಂಡಿಗಳಿವೆ. ವಾಹನ ಸಂಚಾರಕ್ಕೆ ಬಹಳ ತೊಂದರೆ ಆಗುತ್ತಿದೆ. ವಾರದ ಹಿಂದೆ ಬೈಕಿನಲ್ಲಿ ತೆರಳುವಾಗ ಹೊಂಡ ಗುಂಡಿಯ ಕಾರಣಕ್ಕೆ ಬಿದ್ದಿದ್ದೆ. ಅದೃಷ್ಟವಶಾತ್ ಪಾರಾದೆ. ನನ್ನಂತೆ ಮತ್ಯಾರಿಗು ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂತ ಈ ರೀತಿಯ ಪ್ರತಿಭಟೆನೆ ನಡೆಸುತ್ತಿದ್ದೇನೆʼ ಎಂದು ತಿಳಿಸಿದರು.
ಮತ್ತಿಮನೆ ಶ್ರೀಕಾಂತ್ ಪ್ರತಿಭಟನೆಗೆ ಜನರು ಉತ್ತಮ ಪ್ರತಿಕ್ರಿಯೆ ಲಭಿಸಿದೆ. ನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಸರ್ಕಾರ ಗುಂಡಿಗಳನ್ನು ಮುಚ್ಚಿದರೆ ಈ ಭಾಗದ ಜನರು, ವಾಹನ ಸವಾರರು ನಿಶ್ಚಿಂತೆಯಿಂದ ಓಡಾಡಬಹುದಾಗಿದೆ.

ಇದನ್ನೂ ಓದಿ » ಶಿವಮೊಗ್ಗ ಹಾಪ್‌ಕಾಮ್ಸ್‌ಗೆ 15 ನಿರ್ದೇಶಕರು ಅವಿರೋಧ ಆಯ್ಕೆ, ವಿಜಯ್‌ಕುಮಾರ್ ಹ್ಯಾಟ್ರಿಕ್ ಸಾಧನೆ
Pot Holes

