ಶಿವಮೊಗ್ಗ ಲೈವ್.ಕಾಂ | HOSANAGARA | 29 ಡಿಸೆಂಬರ್ 2019
ಕೋಡೂರು ಕೆನರಾ ಬ್ಯಾಂಕ್’ನ ಅಧಿಕಾರಿ ಎಂದು ನಂಬಿಸಿ ಮಹಿಳೆಯೊಬ್ಬರನ್ನು ವಂಚಿಸಿ, ಅವರ ಅಕೌಂಟ್’ನಿಂದ ಹಣ ದೋಚಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು ಘಟನೆ?
ಹೊಸನಗರ ಬಟ್ಟೆಮಲ್ಲಪ್ಪ ಗ್ರಾಮದ ಛಾಯಾ (23) ಎಂಬುವವರಿಗೆ ವಯಕ್ತಿಯೊಬ್ಬರ ಕರೆ ಮಾಡಿದ್ದಾನೆ. ತನ್ನನ್ನು ಕೋಡೂರು ಕೆನರಾ ಬ್ಯಾಂಕ್ ಅಧಿಕಾರಿ ಎಂದು ಪರಿಚಿಯಿಸಿಕೊಂಡಿದ್ದಾನೆ. ನಿಮ್ಮ ಎಟಿಎಂ ಕಾರ್ಡ್ ಅವಧಿ ಮುಕ್ತಾಯವಾಗಿದೆ. ನವೀಕರಿಸಲು ಎಟಿಎಂ ಕಾರ್ಡ್ ಮತ್ತು ಮೊಬೈಲ್’ಗೆ ಬರುವ ಒಟಿಪಿ ನಂಬರ್ ಕೊಡುವಂತೆ ಸೂಚಿಸುತ್ತಾನೆ. ಇದನ್ನು ನಂಬಿದ ಛಾಯಾ ಅವರು, ಒಪ್ಪಿಗೆ ನಂಬರ್’ಗಳನ್ನು ನೀಡಿದ್ದಾರೆ.
ಕಾರ್ಡ್ ಮತ್ತು ಒಟಿಪಿ ನಂಬರ್ ನೀಡಿದ ಕೆಲವೇ ಕ್ಷಣದಲ್ಲಿ ಛಾಯಾ ಅವರ ಬ್ಯಾಂಕ್ ಅಕೌಂಟ್’ನಿಂದ 39,499 ರೂ. ಹಣ ಡ್ರಾ ಆಗಿದೆ. ಇದರಿಂದ ಆತಂಕಕ್ಕೀಡಾದ ಛಾಯಾ ಅವರು ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ATM fraud Case in Hosanagara Battemallappa. Woman lost 39 thousand rupees. A case has been registered in Hosanagara Police Station.