ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
HOSANAGARA, 1 AUGUST 2024 : ಚಕ್ರಾ, ಸಾವೇಹಕ್ಲು ಜಲಾಶಯಗಳಿಗೆ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಬಿಜೆಪಿ ಶಾಸಕರು ಬಾಗಿನ (Bagina) ಅರ್ಪಿಸಿದರು. ನಾಲ್ಕು ದಶಕದಲ್ಲಿ ಇದೇ ಮೊದಲ ಬಾರಿ ಇವರೆಡು ಜಲಾಶಯಗಳಿಗೆ ಬಾಗಿನ ಅರ್ಪಿಸಲಾಗಿದೆ.
ಯಾರೆಲ್ಲ ಏನೇನು ಹೇಳಿದರು?
ಈ ಅವಳಿ ಜಲಾಶಯ ಪ್ರದೇಶ ಪ್ರವಾಸೋಧ್ಯಮಕ್ಕೆ ಹೇಳಿ ಮಾಡಿಸಿದ ಜಾಗ. ಜನರು ಜಾಗವನ್ನು ಆಸ್ವಾಧಿಸಲು ಅವಕಾಶ ಮಾಡಿಕೊಡಬೇಕಿದೆ. ಅದರಲ್ಲು ನೀರು ತುಂಬಿ ಸುಭೀಕ್ಷೆ ಹೊರಸೂಸುವ ಹೊತ್ತಲ್ಲಿ ಈ ಪ್ರದೇಶ ಎಲ್ಲರ ಕಣ್ಮನ ಸೆಳೆಯುತ್ತದೆ. ಇದರ ಸಂರಕ್ಷಣೆ ಜೊತೆಗೆ ಅಭಿವೃದ್ಧಿ ಕೂಡ ಅಗತ್ಯವಾಗಿದೆ. ಆರಗ ಜ್ಞಾನೇಂದ್ರ, ಶಾಸಕ
ಜಲಾಶಯ ಪ್ರದೇಶ ಅದ್ಭುತವಾಗಿದೆ. ಎಲ್ಲೆಲ್ಲೂ ನೀರು ಕಾಣುತ್ತಿದೆ. ಮಲೆನಾಡಿಗೆ ಈ ನೀರು ಶಾಪವೂ ಹೌದು. ಆದರೆ ದೇಶದ ಪ್ರಾಕೃತಿಕ ಸಂಪನ್ಮೂಲದ ದೃಷ್ಟಿಯಿಂದ ವರವೂ ಹೌದು. ಸುಂದರವಾದ ಪ್ರದೇಶ. ಇದು ಸದಾ ಲವಲವಿಕೆಯಿಂದ ಇರಬೇಕು. ಇದನ್ನು ಬಳಸಿಕೊಂಡು ಪ್ರವಾಸೋಧ್ಯಮ ಜೊತೆಗೆ ಉದ್ಯೋಗ ಸೃಷ್ಟಿ ಆಗುವಂತ ಯೋಜನೆಗಳು ರೂಪಿಸಬೇಕಾಗಿದೆ. ಹರತಾಳು ಹಾಲಪ್ಪ, ಮಾಜಿ ಸಚಿವ
ಹುಡುಗನಾಗಿದ್ದಾಗ ಅನೇಕ ಬಾರಿ ಜಲಾಶಯಕ್ಕೆ ಬಂದಿದ್ದೇನೆ. ಇದು ಅದ್ಭುತ ಪ್ರವಾಸಿ ತಾಣ. ಪ್ರಕೃತಿಯೊಂದಿಗೆ ಬದುಕಿ ಪ್ರಕೃತಿಯನ್ನು ಆರಾಧಿಸಬೇಕು. ಪ್ರವಾಸಿ ಸ್ಥಳವಾಗಿ ಆದ್ಯತೆ ನೀಡಬೇಕಿದೆ. ಎಸ್.ಎನ್.ಚನ್ನಬಸಪ್ಪ, ಶಾಸಕ
ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಡಾ. ಧನಂಜಯ ಸರ್ಜಿ, ತಹಶೀಲ್ದಾರ್ ರಶ್ಮೀ ಹಾಲೇಶ್, ವಾರಾಹಿ ಯೋಜನೆ ಕಾಮಗಾರಿ ವಿಭಾಗದ ಪ್ರಭಾರ ಅಧೀಕ್ಷಕ ಎಂಜಿನಿಯರ್ ಪ್ರಕಾಶ ಬ್ರಹ್ಮಾವರ್, ವಿದ್ಯುತ್ ವಿಭಾಗದ ಅಧೀಕ್ಷಕ ಎಂಜಿನಿಯರ್ ಮಹೇಶ್ ಬಿ.ಸಿ, ಕಾಮಗಾರಿ ವಿಭಾಗದ ಎಇಇ ಸುದೀಪ್, ಭದ್ರತಾ ಅಧಿಕಾರಿ ಸದಾಶಿವ, ಕರಿಮನೆ ಗ್ರಾಪಂ ಉಪಾಧ್ಯಕ್ಷ ರಮೇಶ ಹಲಸಿನಹಳ್ಳಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ ⇓
ನಮ್ಮೂರ ಹೆಮ್ಮೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ಹೆಸರು ನೋಂದಣಿಗೆ ಮನವಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422