ಶಿವಮೊಗ್ಗ ಲೈವ್.ಕಾಂ | SHIMOGA | 8 ನವೆಂಬರ್ 2019
ರೈತರ ಬೆಳೆಗೆ ಸರಿಯಾದ ಬೆಲೆ ಸಿಕ್ಕಾಗ ಮಾತ್ರ ಆತ ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯ. ಆದರೆ, ಬಹಳಷ್ಟು ಸಮಯದಲ್ಲಿ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ರೈತರ ಇನ್ನೂ ಆರ್ಥಿಕವಾಗಿ ದುರ್ಬಲನಾಗಿದ್ದಾನೆ.
ಫಸಲು ಕೈಗೆ ಬಂದು ಇನನ್ನೇನು ಮಾರಾಟ ಮಾಡಬೇಕು ಎನ್ನುವ ಸಂದರ್ಭದಲ್ಲಿ ಧಾರಣೆ ಕುಸಿದಿರುತ್ತದೆ. ಆಗ ಅನಿವಾರ್ಯವಾಗಿ ಆತ ಕಡಿಮೆ ಬೆಲೆಗೆ ಬೆಳೆ ಮಾರಾಟ ಮಾಡಬೇಕಾದ ಪರಿಸ್ಥಿತಿ ರೈತರನ್ನು ಬಾಧಿಸತೊಡಗಿದೆ.
ರೈತರ ಸಮಸ್ಯೆಗೆ ಪರಿಹರಿಸಿದ ಸಹಕಾರಿ ಸಂಸ್ಥೆ
ಇದು ಒಬ್ಬಿಬ್ಬ ರೈತರ ಸಮಸ್ಯೆಯಲ್ಲಿ ಬಹುತೇಕ ಎಲ್ಲ ರೈತರ ಸಮಸ್ಯೆ. ಮಾರುಕಟ್ಟೆಯಲ್ಲಿ ಸರಿಯಾದ ಬೆಲೆಸಿಗುವವರೆಗೆ ಬೆಳೆ ಸಂರಕ್ಷಣೆ ಮಾಡಕೊಳ್ಳಲು ಸಾಧ್ಯವಾಗದ ಕಾರಣ ರೈತರು ಕಡಿಮೆ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ನಿವಾರಣೆಗಾಗಿ ರೈತರ ಬೇಡಿಕೆಯಂತೆ ಶಿವಮೊಗ್ಗವನ್ನು ಕೇಂದ್ರವಾಗಿಸಿಕೊಂಡು ಉತ್ತಮ ಧಾರಣೆ ಬರುವ ತನಕ ಕೃಷಿ ಉತ್ಪನ್ನಗಳನ್ನು ಶೇಖರಿಸಿಡಲು ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯು ಮಲೆನಾಡಿನ ಕೇಂದ್ರ ಸ್ಥಾನವಾದ ಹೊಸನಗರ ತಾಲೂಕಿನ ರಿಪ್ಪನ್ಪೇಟೆಯಲ್ಲಿ ಆಧುನಿಕ ಶೈಲಿಯಲ್ಲಿ ಶ್ರೀ ಶಾರದಾ ಕೋಲ್ಡ್ ಸ್ಟೋರೇಜ್ ಅನ್ನು ನಿರ್ಮಿಸಿದೆ.
10 ಕೋಟಿ ವೆಚ್ಚದ ಸ್ಟೋರೇಜ್!
ರೈತರಿಗೆ ಸರಕಾರವು ಅನೇಕ ಸವಲತ್ತುಗಳನ್ನು ನೀಡುತ್ತಿದೆ. ಆದರೆ ರೈತರ ಪ್ರಮುಖ ಬೇಡಿಕೆಯಾದ ಉತ್ತಮ ಧಾರಣೆ ಮತ್ತು ಕೃಷಿ ಉತ್ಪನ್ನಗಳನ್ನು ಸರಿಯಾದ ಧಾರಣೆ ಬರುವ ತನಕ ಶೇಖರಿಸಿಡಲು ಶೀಥಲೀಕರಣ ವ್ಯವಸ್ಥೆಯ ಬೇಡಿಕೆ ಮಾತ್ರ ಸರಿಯಾಗಿ ಈಡೇರಿಲ್ಲ. ಇದನ್ನು ಮನಗಂಡು ನಿರ್ಮಿಸಲಾಗಿರುವ ಶ್ರೀ ಶಾರದಾ ಕೋಲ್ಡ್ ಸ್ಟೋರೇಜ್ಗೆ ಬರೋಬ್ಬರಿ 10 ಕೋಟಿ ರೂ. ಖರ್ಚು ಮಾಡಲಾಗಿದೆ.

ಶುಂಠಿ ಬೆಳೆಗೆ ತುಂಬಾನೆ ಉಪಯುಕ್ತ
ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆ, ಶಿಕಾರಿಪುರ ತಾಲೂಕಿನ ಸುತ್ತಮುತ್ತ ದೊಡ್ಡ ಪ್ರಮಾಣದಲ್ಲಿ ಶುಂಠಿ ಬೆಳೆಯಲಾಗಿದೆ. ಹೀಗಾಗಿ ರೈತರಿಗೆ ಕೋಲ್ಡ್ ಸ್ಟೋರೇಜ್ ಒಂದರ ಅಗತ್ಯ ಅತಿ ಹೆಚ್ಚಾಗಿತ್ತು. ಇದರ ಜತೆಗೆ ಚಾಲಿ ಅಡಕೆ, ಸಿಪ್ಪೆಗೋಟು ಅಡಕೆ, ಒಣ ಮೆಣಸು, ಹುಣಸೆ ಹಣ್ಣು ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳನ್ನು ಇಲ್ಲಿ ದೀರ್ಘಕಾಲದವರೆಗೆ ದಾಸ್ತಾನು ಮಾಡಬಹುದಾಗಿದೆ.
5 ಸಾವಿರ ಟನ್ ಸಾಮರ್ಥ್ಯ ಸ್ಟೋರೇಜ್
ಸುಮಾರು 25 ಸಾವಿರ ಚದರಡಿ ಜಾಗದಲ್ಲಿ ನಿರ್ಮಿಸಲಾಗಿರುವ ಈ ಕೋಲ್ಡ್ ಸ್ಟೋರೇಜ್ನಲ್ಲಿ ಒಟ್ಟು ನಾಲ್ಕು ಮಹಡಿಗಳಿದ್ದು, ಒಟ್ಟು 5 ಸಾವಿರ ಟನ್ ಕೋಲ್ಡ್ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಸುಮಾರು 1 ಲಕ್ಷ ಚೀಲಗಳನ್ನು ಇರಿಸಬಹುದಾಗಿದೆ. ಕಡಿಮೆ ದರದ ಬಾಡಿಗೆಯನ್ನು ನಿಗದಿಪಡಿಸಲಾಗಿದೆ. ಆರು ತಿಂಗಳು ಮತ್ತು ವಾರ್ಷಿಕ ಎಂಬ ಎರಡು ಹಂತದ ಬಾಡಿಗೆ ದರವನ್ನು ನಿಗದಿಪಡಿಸಲಾಗಿದೆ.

ಸೋಲಾರ್ ವಿದ್ಯುತ್ ಬಳಕೆ
ಈ ಶೀಥಲೀಕರಣ ಘಟಕದ ಕಾರ್ಯನಿರ್ವಹಣೆಗೆ ೧೫೦ ಕಿ. ವ್ಯಾ. ವಿದ್ಯುತ್ ಬೇಕಾಗುತ್ತದೆ. ಘಟಕದ ಮೇಲ್ಛಾವಣಿಗೆ ಸೋಲಾರ್ ಪ್ಯಾನಲ್ ಹೊದಿಗೆ ಹಾಕಿ ವಿದ್ಯುತ್ ಉತ್ಪಾದಿಸುವ ಘಟಕವನ್ನು ಸುಮಾರು ೭೬ ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದ್ದು, ೧೦೦ ಕಿ. ವ್ಯಾ. ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ.
ರಿಪ್ಪನ್’ಪೇಟೆ ಎಪಿಎಂಸಿ ಆವರಣದಲ್ಲಿ ನಿರ್ಮಿಸಲಾಗಿರುವ ಕೋಲ್ಡ್ ಸ್ಟೋರೇಜ್ ಘಟಕವನ್ನು ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ.ಜಿ.ಭೀಮೇಶ್ವರ ಜೋಷಿ ಅವರು ಉದ್ಘಾಟಿಸಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಸಂಘದ ಅಧ್ಯಕ್ಷ ಶಿವಶಂಕರ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200