ಹೊಸನಗರ : ಶ್ರೀಗಂಧ ಮರವನ್ನು (sandalwood) ಅಕ್ರಮವಾಗಿ ಕಡಿತಲೆ ಮಾಡಿ ತುಂಡುಗಳನ್ನಾಗಿ ಕತ್ತರಿಸಿ ಬೈಕ್‌ನಲ್ಲಿ ಸಾಗಣೆ ಮಾಡುತ್ತಿದ್ದ ಇಬ್ಬರು ಶ್ರೀಗಂಧ ಕಳ್ಳರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಕೆರೆಹಳ್ಳಿ ಹೋಬಳಿ ಹೊಸಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಕಡಿತಲೆ ಮಾಡಲಾಗಿತ್ತು.
ಹೊಸಕೆಸರೆ ಗ್ರಾಮದ ಸೊಪ್ಪಿನಮಲ್ಲೆ ನಿವಾಸಿ ದಿನೇಶ್ ಅಲಿಯಾಸ್ ವಿಜೇತ (31) ಮತ್ತು ಹಿರಿಯೋಗಿ ಗ್ರಾಮದ ಮಾವಿನಕಟ್ಟೆಯ ರಾಘವೇಂದ್ರ (32) ಬಂಧಿತರು. ಹೊಸಕೆಸರೆ ಗ್ರಾಮದ ನೀರೇರಿ ನಿವಾಸಿ ಎಂ.ಭದ್ರಪ್ಪ ಅಲಿಯಾಸ್ ಕರಿಮಂಜ (32) ತಲೆಮರೆಸಿಕೊಂಡಿದ್ದಾನೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಿಂದ 18 ಕೆ.ಜಿ. ಶ್ರೀಗಂಧ ಹಾಗೂ ಸಾಗಣೆಗೆ ಬಳಸುತ್ತಿದ್ದ 3 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಹೊಸನಗರ ವಲಯ ಅರಣ್ಯಾಧಿಕಾರಿ ಎಸ್.ಅನಿಲ್ ಕುಮಾರ್, ಹರತಾಳು ಶಾಖೆ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಕೆ ಎನ್, ಸಿಬ್ಬಂದಿ ಪುಟ್ಟಸ್ವಾಮಿ ಕೆ.ವಿ, ಭರತ್ ಕುಮಾರ್, ಸುರೇಶ್ ವಿ, ರಾಜು ಎನ್, ಪ್ರಶಾಂತ ಜಿ, ವಾಹನ ಚಾಲಕ ಮಹೇಶ್ ಇದ್ದರು.
ಇದನ್ನೂ ಓದಿ » ಹಂದಿಗಾಗಿ ಕೈ ಕೈ ಮಿಲಾಯಿಸಿ ಆಸ್ಪತ್ರೆ ಸೇರಿದ ಯುವಕರು, ದೂರು, ಪ್ರತಿದೂರು ದಾಖಲು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200