ಐದು ವರ್ಷದ ಚಿರತೆಯ ಮೃತದೇಹ ಪತ್ತೆ, ಎಲ್ಲಿ? ಆಗಿದ್ದೇನು?

ಹೊಸನಗರ: ತಾಲೂಕಿನ ಯಡೂರು ಗ್ರಾಮದಲ್ಲಿ ಶನಿವಾರ ಚಿರತೆಯ ಮೃತದೇಹ (Dead leopard) ಪತ್ತೆಯಾಗಿದೆ. ಬೆಳಗ್ಗೆ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಯಡೂರು ಗ್ರಾಮದಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಮರಣೋತ್ತರ ಪರೀಕ್ಷೆಯ ನಂತರ ಚಿರತೆ 5 ವರ್ಷದ ಪ್ರಾಯದ್ದು ಎಂದು ಗೊತ್ತಾಗಿದೆ. ಮೇಲ್ನೋಟಕ್ಕೆ ಸ್ವಾಭಾವಿಕ ಸಾವು ಎಂದು ತಿಳಿದುಬಂದಿದೆ. ಆರ್‌ಎಫ್‌ಒ ಸಂತೋಷ ಮಲ್ಲನಗೌಡ್ರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಶು ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆದು ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

Dead-leopard-found-in-Yaduru-village-Hosanagara

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮನೆಯೊಳಗೆ ನುಗ್ಗಿ ವೃದ್ಧೆಯ ಕೈಲಿದ್ದ ರೋಲ್ಡ್‌ ಗೋಲ್ಡ್‌ ಬಳೆ ಕದ್ದೊಯ್ದ ಕಳ್ಳರು..!

ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮೃತದೇಹ ಪತ್ತೆಯಾದ ಜಾಗದಲ್ಲೇ ನಿಯಮಾನುಸಾರ ಅಂತ್ಯಕ್ರಿಯೆ ಮಾಡಲಾಯಿತು. ತಹಸೀಲ್ದಾ‌ರ್ ಭರತ್ ರಾಜ್, ಎಸಿಎಫ್ ಮೋಹನ್ ಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Dead-leopard-found-in-Yaduru-village-Hosanagara

Leave a Comment