ಭತ್ತ ಒಕ್ಕಲು ವೇಳೆ ಯಂತ್ರಕ್ಕೆ ಸಿಲುಕಿ ರೈತನ ಬಲಗೈ ಕಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 DECEMBER 2022

ಹೊಸನಗರ : ಭತ್ತದ ಒಕ್ಕಲು ಮಾಡುವಾಗ ಮಿಷನ್ ಗೆ ಸಿಲುಕಿ ರೈತನ ಕೈ ತುಂಡಾಗಿದೆ. ಕೂಡಲೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. (farmer hand cut)

Shimoga Nanjappa Hospital

ಹೊಸನಗರ ತಾಲೂಕು ದೇವಗಂಗೆ ಗ್ರಾಮದ ರೈತ ವಿಶ್ವಾನಾಥ್ ಅವರ ಬಲಗೈ ತುಂಡಾಗಿದೆ. ಗ್ರಾಮದ ಮಹೇಶ ಗೌಡ ಎಂಬುವವರ ಜಮೀನಿನಲ್ಲಿ ಭತ್ತದ ಒಕ್ಕಲು ಮಾಡಲಾಗುತ್ತಿತ್ತು. ಈ ವೇಳೆ ವಿಶ್ವನಾಥ್ ಅವರ ಬಲಗೈ ಒಕ್ಕಲು ಯಂತ್ರಕ್ಕೆ ಸಿಲುಕಿ ತುಂಡಾಗಿದೆ. (farmer hand cut)

ಕೈ ಜೋಡಿಸಲು ಅಸಾಧ್ಯ

ತಕ್ಷಣ ವಿಶ್ವನಾಥ್ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪ್ರಾಥಮಿಕ ಚಿಕಿತ್ಸೆ ಬಳಿಕ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆ ಕರೆದೊಯ್ಯಲಾಯಿತು. ಆದರೆ ಕೈ ಜೋಡಿಸಲು ಅಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ – ಕಾಡಿನಲ್ಲಿ ಉರುಳಿಗೆ ಸಿಲುಕಿ ಒದ್ದಾಡಿ ಪ್ರಾಣ ಬಿಟ್ಟ ಚಿರತೆ

ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Shimoga Nanjappa Hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 7, 2022

Leave a Comment