ಶಿವಮೊಗ್ಗ ಲೈವ್.ಕಾಂ | HOSANAGARA NEWS | 16 JUNE 2021
ಹೊಸನಗರ ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದೆ. ಕ್ಷಣಹೊತ್ತು ಬಿಡುವು ಕೊಡದೆ ಮುಂಗಾರು ಆರ್ಭಟಿಸುತ್ತಿದೆ. ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಹೊಸನಗರ ತಾಲೂಕಿನಾದ್ಯಂತ 320.8 ಮಿ.ಮೀ ಮಳೆಯಾಗಿದೆ. ಜೂನ್ ತಿಂಗಳ ವಾಡಿಕೆ ಮಳೆ 680.10 ಮಿ.ಮೀ. ಆದರೆ ತಿಂಗಳ ಮೊದಲರ್ಧದಲ್ಲೇ ತಾಲೂಕಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದೆ. ಈವರೆಗೂ 1036.7 ಮಿ.ಮೀ ಮಳೆಯಾಗಿದೆ.
ಮಾಣಿ ವ್ಯಾಪ್ತಿಯಲ್ಲಿ 106 ಮಿ.ಮೀ, ಯಡೂರಿನಲ್ಲಿ 125 ಮಿ.ಮೀ, ಹುಲಿಕಲ್‍ನಲ್ಲಿ 113 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 135 ಮಿ.ಮೀ, ಚಕ್ರಾದಲ್ಲಿ 102 ಮಿ.ಮೀ, ಸಾವೇಹಕ್ಲು ಭಾಗದಲ್ಲಿ 92 ಮಿ.ಮೀ ಮಳೆಯಾಗಿದೆ.
ಭಾರಿ ಮಳೆಯಿಂದಾಗಿ ಮಾಣಿ ಡ್ಯಾಂಗೆ 3898 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಪಿಕಪ್ ಡ್ಯಾಂಗೆ 738 ಕ್ಯೂಸೆಕ್, ಚಕ್ರಾ ಡ್ಯಾಂನಲ್ಲಿ 1768 ಕ್ಯೂಸೆಕ್, ಸಾವೇಹಕ್ಲು ಜಲಾಶಯಕ್ಕೆ 1541 ಕ್ಯೂಸೆಕ್ ಒಳಹರಿವು ಇದೆ.
ಇನ್ಮುಂದೆ ಕರೋನ ಪರೀಕ್ಷೆ ನಿಮ್ಮ ಮನೆಯಲ್ಲೇ ಆಗುತ್ತೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೆ ಏರಿಯಾದಿಂದ ಕರೆ ಮಾಡಿ. ಪರೀಕ್ಷೆಗೆ ನಿಮ್ಮ ಮನೆಗೆ ಬರ್ತಾರೆ ತಜ್ಞರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]