ಶಿವಮೊಗ್ಗಕ್ಕೆ ಕೋವಿಡ್ ಸ್ಯಾಂಪಲ್​​ಗ​ಳನ್ನು ತರುತ್ತಿದ್ದ ಕಾರು ಅಪಘಾತ, ನಾಲ್ವರಿಗೆ ಸಣ್ಣಪುಟ್ಟ ಗಾಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | HOSANAGARA NEWS | 15 MAY 2021

ಕೋವಿಡ್ ಸ್ಯಾಂಪಲ್‍ಗಳನ್ನು ಶಿವಮೊಗ್ಗದ ಲ್ಯಾಬ್‍ಗೆ ನೀಡಲು ತರುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ತಾಲೂಕು ವೈದ್ಯಾಧಿಕಾರಿ ಸೇರಿ ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿದೆ.

ಕಾರು ಹೊಸನಗರದಿಂದ ಶಿವಮೊಗಕ್ಕೆ ಬರುತ್ತಿತ್ತು. ಗವಟೂರು ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ, ಪಕ್ಕದ ಚರಂಡಿಗೆ ಕಾರು ಇಳಿದಿದೆ.

ಕಾರಿನಲ್ಲಿ ಹೊಸನಗರ ತಾಲೂಕು ವೈದ್ಯಾಧಿಕಾರಿ ಡಾ.ಸುರೇಶ್ ಸೇರಿ ನಾಲ್ವರಿದ್ದರು. ಸಣ್ಣಪುಟ್ಟ ಗಾಯವಾಗಿದ್ದು, ರಿಪ್ಪನ್‍ಪೇಟೆ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment