ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | HOSANAGARA NEWS | 08 JANUARY 2021
ಪಲ್ಟಿಯಾಗುತ್ತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಹೊಸನಗರದ ಹೆರೆಟೆಯಲ್ಲಿ ಸಂಭವಿಸಿದೆ. ಯುವತಿ ಸ್ಥಳದಲ್ಲೇ ಮೃತಿಪಟ್ಟಿದ್ದು, ನಾಲ್ಕು ಮಂದಿಗೆ ಗಾಯವಾಗಿದೆ.
ದಾವಣಗೆರೆಯ ಆಂಜನೇಯ ಬಡಾವಣೆಯ ಚಿನ್ಮಯಿ (23) ಮೃತ ದುರ್ದೈವಿ. ಕೋಟೇಶ್ವರದಲ್ಲಿ ಕಾರ್ಯಕ್ರಮವೊಂದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ಹೇಗಾಯ್ತು ಅಪಘಾತ?
ಸಿಮೆಂಟ್ ತುಂಬಿದ್ದ ಹತ್ತು ಚಕ್ರದ ಲಾರಿ ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿತ್ತು. ಕಾರು ಕೋಟೇಶ್ವರದಿಂದ ದಾವಣಗೆರೆಗೆ ಮರಳುತ್ತಿತ್ತು. ಹೆರೆಟೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಪಲ್ಟಿಯಾಗುತ್ತಿತ್ತು. ಎದುರಿನಿಂದ ಬರುತ್ತಿದ್ದ ಕಾರು ಲಾರಿಯ ಅಡಿಯಲ್ಲಿ ಸಿಲುಕುವ ಸಾದ್ಯತೆ ಇತ್ತು. ಇದನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದ್ದು, ಸ್ವಲ್ಪದರಲ್ಲಿ ಲಾರಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ತಲೆಗೆ ತೀವ್ರ ಗಾಯವಾಗಿ ಚಿನ್ಮಯಿ ಮೃತಪಟ್ಟಿದ್ದಾಳೆ.
ಕಾರಿನಲ್ಲಿ ಯಾರೆಲ್ಲ ಇದ್ದರು?
ಎಜುಕೇಷನ್ ಕನ್ಸಲ್ಟೆಂಟ್ ಮತ್ತು ಜೆಸಿಐನಲ್ಲಿ ಸಕ್ರಿಯರಾಗಿದ್ದ ದಾವಣಗೆರೆಯ ಶ್ರೀನಿವಾಸ್ ಅವರು, ಕೋಟೇಶ್ವರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬ ಸಹಿತ ತೆರಳಿದ್ದರು. ಕಾರ್ಯಕ್ರಮದ ಬಳಿಕ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಶ್ರೀನಿವಾಸ್ (54), ಪತ್ನಿ ಬೃಂದಾ (48), ಮಗಳು ಲಾಸ್ಯ (13), ಚಾಲಕ ಶಶಿಧರ್ (24) ಗಾಯಗೊಂಡಿದ್ದಾರೆ. ಮತ್ತೊಬ್ಬ ಮಗಳು ಚಿನ್ಮಯಿ (23) ಮೃತಪಟ್ಟಿದ್ದಾಳೆ. ಕಾರು ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದಂತಾಗಿದೆ.
ಹೊಸನಗರ ಠಾಣೆ ಸಿಪಿಐ ಜಿ.ಕೆ.ಮಧುಸೂದನ್, ಪಿಎಸ್ಐ ಶಿವರಾಜ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422