ಶಿವಮೊಗ್ಗ ಲೈವ್.ಕಾಂ | HOSANAGARA NEWS | 27 ಆಗಸ್ಟ್ 2021
ಹೆಣ್ಣು ಮಕ್ಕಳು ಮನೆಯಲ್ಲೇ ಇರಿ ಎಂದು ಹೇಳಿಕೆ ನೀಡಲು ಪೊಲೀಸ್ ವ್ಯವಸ್ಥೆ ಬೇಕಾ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪ್ರಶ್ನಿಸಿದ್ದಾರೆ.
ಹೊಸನಗರ ತಾಲೂಕು ನಗರ ಹೋಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರಗ ಜ್ಞಾನೇಂದ್ರ ಅವರು ತಮ್ಮನ್ನು ತಾವು ಸರಿಪಡಿಸಿಕೊಳ್ಳಬೇಕು. ತೀರ್ಥಹಳ್ಳಿ ಕ್ಷೇತ್ರದ ಜನರ ಘನತೆ, ಗೌರವ ಉಳಿಸಬೇಕು ಎಂದು ಸಲಹೆ ನೀಡಿದರು.
ನಮ್ಮನ್ನು ಬೈದುಕೊಂಡು ಓಡಾಡುತ್ತಿದ್ದರು
ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯಲ್ಲಿ ನಮ್ಮನ್ನು ಬೈದುಕೊಂಡು ಓಡಾಡುತ್ತಿದ್ದರು. ಈಗ ಅದನ್ನೇ ಮಾಡಿಕೊಂಡು ರಾಜ್ಯದಲ್ಲಿ ಓಡಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೂ ಅತ್ಯಾಚಾರಕ್ಕೂ ಏನು ಸಂಬಂಧ. ಕಾಂಗ್ರೆಸ್ ಪಕ್ಷದವರು ತಮ್ಮ ಮೇಲೆ ಅತ್ಯಾಚಾರ ಮಾಡಿದರು ಎಂದು ಹೇಳುವುದು ಎಷ್ಟು ಸರಿ. ಗೃಹ ಸಚಿವ ಸ್ಥಾನಕ್ಕೆ ತಕ್ಕ ಪ್ರಬುದ್ಧತೆಯನ್ನು ತೋರಿಸಬೇಕು ಎಂದರು.
ಒಂದು ಪಕ್ಷದ ಪರ ಹೇಳಿಕೆ ನೀಡಬಾರದು
ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಟ್ಟುಕೊಂಡು ಹೇಳಿಕೆ ನೀಡಬಾರದು. ರಾಜ್ಯದ ಆರು ಕೋಟಿ ಜನರನ್ನು ಗಮನದಲ್ಲಿ ಇರಿಸಿಕೊಂಡು ಮಾತನಾಡಬೇಕು. ಅಧಿಕಾರದಲ್ಲಿದ್ದಾಗ ಒಂದು ಪಕ್ಷದ ಪರವಾದ ಹೇಳಿಕೆ ನೀಡುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ನೀಡಿದ ಹೇಳಿಕೆಯಿಂದ ವಿವಾದವನ್ನು ಅವರೆ ಮೈಮೇಲೆ ಎಳದುಕೊಂಡಿಕೊಂಡಿದ್ದಾರೆ ಎಂದರು.
ಬಂಗಾರದ ಅಂಗಡಿ ಬಾಗಿಲು ಹಾಕೇ ಇರೋಕಾಗುತ್ತಾ?
ಬಂಗಾರದ ಅಂಗಡಿಯವರು ರಾತ್ರಿ ಹೊತ್ತಲ್ಲೂ ವ್ಯಾಪಾರ ಮಾಡುತ್ತಾರೆ. ದರೋಡೆ ನಡೆಯುತ್ತೆ ಎಂದು ಹಗಲು ಹೊತ್ತಲ್ಲೂ ಬಾಗಿಲು ಹಾಕಿಕೊಂಡೇ ಇರುಲು ಸಾಧ್ಯವೇ. ಬಾಗಿಲು ಹಾಕಿಕೊಂಡು ಇರಿ ಎಂದು ಹೇಳಲು ಪೊಲೀಸ್ ವ್ಯವಸ್ಥೆ ಬೇಕಾ. ಅದೇ ರೀತಿ ಹೆಣ್ಣು ಮಕ್ಕಳು ಮನೆಯಲ್ಲೇ ಇರಿ ಎಂದು ಹೇಳಲು ಪೊಲೀಸ್ ವ್ಯವಸ್ಥೆ ಬೇಕಾ. ಅವರ ಕುಟುಂಬದವರೆ ಹೆಣ್ಣು ಮಕ್ಕಳ ರಕ್ಷಣೆ ಮಾಡಕೊಳ್ಳುತ್ತಾರೆ ಎಂದು ಕಿಮ್ಮನೆ ರತ್ನಾಕರ್ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ತಿರುಗೇಟು ನೀಡಿದರು.
ಐದು ಕ್ರಿಮಿನಲ್ ಕೇಸುಗಳಿವೆ
ಇನ್ನು, ಆರಗ ಜ್ಞಾನೇಂದ್ರ ಅವರ ವಿರುದ್ಧವೇ ಐದು ಕ್ರಿಮಿನಲ್ ಕೇಸುಗಳಿವೆ. ಕೋಮುಗಲಭೆ ಸಂಬಂಧ ಅವರ ವಿರುದ್ಧ ಕ್ರಿಮಿನಕಲ್ ಕೇಸುಗಳಿದ್ದು, ಅವರೊಬ್ಬ ಆರೋಪಿ ಅಂತಲೂ ಕಿಮ್ಮನೆ ರತ್ನಾಕರ್ ತಿರುಗೇಟು ನೀಡಿದ್ದಾರೆ.
ತೀರ್ಥಹಳ್ಳಿಯ ಘನತೆ ಉಳಿಸಿ
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆಯಿಂದ ತೀರ್ಥಹಳ್ಳಿಯ ಘನತೆಗೆ ಕುಂದು ಬರುತ್ತಿದೆ. ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ, ಗೋಪಾಲಗೌಡರು ಯಾವ ರೀತಿ ನಡೆದುಕೊಳ್ಳುತ್ತಿದ್ದರು ಎಂಬುದನ್ನು ನೋಡಲಿ. ಅವರ ಹೇಳಿಕೆಗಳು ಜಾತಿ, ಧರ್ಮ, ಪಕ್ಷದ ಮೇಲೆ ನಿಲ್ಲುತ್ತಿರಲಿಲ್ಲ. ಮನುಷ್ಯತ್ವ, ಮಾನವತವಾದದ ಮೇಲೆ ಅವರ ಹೇಳಿಕೆ ಇರುತ್ತಿದ್ದವು. ಇವುಗಳನ್ನು ಆರಗ ಜ್ಞಾನೇಂದ್ರ ಅವರು ಗಮನಿಸಿ ತೀರ್ಥಹಳ್ಳಿ ಕ್ಷೇತ್ರದ ಜನರ ಘನತೆ, ಗೌರವ ಉಳಿಸಬೇಕು ಎಂದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200