SHIVAMOGGA LIVE NEWS | 9 JANUARY 2025
ಹೊಸನಗರ : ಮನೆ ಮುಂದೆ ಮಲಗಿದ್ದ ಸಾಕುನಾಯಿಯನ್ನು ಚಿರತೆ (leopard) ಹೊತ್ತೊಯ್ದಿದೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊಸನಗರ ತಾಲೂಕು ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಬ್ಬಿಗ ಗ್ರಾಮದ ಮಂಜಪ್ಪಗೌಡ ಅವರ ಮನೆ ಮುಂದೆ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದೆ.
ತಡರಾತ್ರಿ ನಾಯಿಗಳು ಜೋರಾಗಿ ಬೊಗಳಿದ್ದವು. ಬೆಳಗ್ಗೆ ಮನೆಯವರು ಹುಡುಕಿದಾಗ ನಾಯಿ ಕಾಣಿಸಿರಲಿಲ್ಲ. ಸಿಸಿಟಿವಿ ಪರಿಶೀಲಿಸಿದಾಗ ಘಟನೆ ಬಳೆಕಿಗೆ ಬಂದಿದೆ.
ಸಿಸಿಟಿವಿ ವಿಡಿಯೋದಲ್ಲಿ ಏನಿದೆ?
ತಡರಾತ್ರಿ ಚಿರತೆಯೊಂದು ಮನೆ ಅಂಗಳಕ್ಕೆ ಬಂದಿದ್ದು, ಬಾಗಿಲಲ್ಲಿ ಮಲಗಿದ್ದ ಸಾಕು ನಾಯಿಯನ್ನು ಹೊತ್ತೊಯ್ದಿದೆ. ನಾಯಿ ತಪ್ಪಿಸಿಕೊಳ್ಳುವುದಕ್ಕು ಅವಕಾಶ ನೀಡದೆ ಕೊತ್ತಿಗೆ ಹಿಡಿದುಕೊಂಡು ಚಿರತೆ ಹೊತ್ತೊಯ್ದಿದೆ.
ಇದನ್ನೂ ಓದಿ » ತ್ಯಾವರೆಕೊಪ್ಪ ಸಫಾರಿಯ ಹುಲಿ ಅಂಜನಿ ಸಾವು, ಕಾರಣವೇನು?
ಚಿರತೆ ಕಾಣಿಸಿಕೊಂಡ ವಿಚಾರ ತಿಳಿದು ಗ್ರಾಮದಲ್ಲಿ ಆತಂಕ ಉಂಟಾಗಿದೆ. ಈಗಾಗಲೇ ಆನೆ ಹಾವಳಿಯಿಂದ ಕಂಗಟ್ಟಿರುವ ಬೆಳ್ಳೂರು ಗ್ರಾಮ ಪಂಚಾಯಿತಿ ನಿವಾಸಿಗಳಿಗೆ ಈಗ ಚಿರತೆ ಭೀತಿ ಎದುರಾಗಿದೆ.