ಜೇನುಕಲ್ಲಮ್ಮ ದೇಗುಲಕ್ಕೆ ನೂತನ ಅಧ್ಯಕ್ಷರ ಆಯ್ಕೆ, ಹೊಸ ಯೋಜನೆಗಳ ಕುರಿತು ಚರ್ಚೆ

 ಶಿವಮೊಗ್ಗ  LIVE 

ಹೊಸನಗರ: ಪುರಾಣ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ (president) ಕಲಗೋಡು ರತ್ನಾಕರ್‌ ಆಯ್ಕೆಯಾಗಿದ್ದಾರೆ. ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.

Kalgodu-Rathnakar-new-president-of-Jenukallama-temple

ದೇವಸ್ಥಾನದ ವ್ಯವಸ್ಥಾಪನೆಗೆ ಮುಜರಾಯಿ ಇಲಾಖೆಯಿಂದ 9 ಸದಸ್ಯರ ಸಮಿತಿ ರಚಿಸಲಾಗಿದೆ. ಅಧ್ಯಕ್ಷ ಕಲಗೋಡು ರತ್ನಾಕರ್‌ ನೇತೃತ್ವದಲ್ಲಿ ವ್ಯವಸ್ಥಾಪನಾ ಸಮಿತಿಯು, ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ಭೇಟಿಯಾಗಿ ಗೌರವಸಿತು.

ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆಯ ಪಟ್ಟಿಯಲ್ಲಿ ಅಮ್ಮನಘಟ್ಟ ಜೇನುಕಲ್ಲಮ್ಮ ಕ್ಷೇತ್ರವು ಸ್ಥಾನ ಪಡೆದಿದೆ. ಈ ಬೆಳವಣಿಗೆ ದೇವಿಯ ಭಕ್ತರಿಗೆ ಸಂತಸ ತಂದಿದೆ. ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಸಮಿತಿಯು ಕಾರ್ಯೋನ್ಮುಖವಾಗಲಿದೆ. ಭಕ್ತರಿಗೆ ಮೂಲ ಸೌಕರ್ಯ ಒದಗಿಸುವುದು, ದೇಗುಲದ ಪರಂಪರೆ ಉಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.ಕಲಗೋಡು ರತ್ನಾಕರ್‌, ಜೇನುಕಲ್ಲಮ್ಮ ದೇಗುಲದ ಅಧ್ಯಕ್ಷ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment