ಶಿವಮೊಗ್ಗ ಲೈವ್.ಕಾಂ | HOSANAGARA NEWS | 07 JUNE 2021
ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಕರೋನ ಸೋಂಕಿತರೊಬ್ಬರನ್ನು ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಕರೆತಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೊಸನಗರದಿಂದ ಶಿವಮೊಗ್ಗದವರೆಗೆ ಸೋಂಕಿತನ ಜೊತೆಗಿದ್ದು ಧೈರ್ಯ ತುಂಬಿದ್ದಾರೆ. ಇವರ ಕೆಲಸಕ್ಕೆ ಪಟ್ಟಣದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹೊಸನಗರ ಪಟ್ಟಣ ಪಂಚಾಯಿತಿ ಸದಸ್ಯ ಸುರೇಂದ್ರ ಕೋಟ್ಯಾನ್ ಅವರು ಸೋಂಕಿತನೊಂದಿಗೆ ಆಂಬುಲೆನ್ಸ್‍ನಲ್ಲಿ ಶಿವಮೊಗ್ಗದವರೆಗೆ ಬಂದಿದ್ದಾರೆ.
ಹೊಸನಗರದ ಟ್ರಯಾಜ್ ಸೆಂಟರ್‍ನಲ್ಲಿದ್ದ ಸೋಂಕಿತರೊಬ್ಬರಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಕೂಡಲೆ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಆದರೆ ಸೋಂಕಿತ ವ್ಯಕ್ತಿ ಆಕ್ಸಿಜನ್ ಮಾಸ್ಕನ್ನು ಪದೇ ಪದೇ ಕಿತ್ತೊಗೆಯುತ್ತಿದ್ದರು. ಹೀಗಾಗದಂತೆ ನೋಡಿಕೊಳ್ಳಲು ಅವರೊಂದಿಗೆ ಯಾರಾದರೊಬ್ಬರು ಇರಬೇಕಿತ್ತು.
ಜವಾಬ್ದಾರಿ ಮೆರೆದಿದ್ದಕ್ಕೆ ಮೆಚ್ಚುಗೆ
ಸೋಂಕಿತ ವ್ಯಕ್ತಿ ಜೊತೆಗೆ ಶಿವಮೊಗ್ಗದವರೆಗೆ ತೆರಳಲು ಪಟ್ಟಣ ಪಂಚಾಯಿತಿ ಸದಸ್ಯ ಸುರೇಂದ್ರ ಕೋಟ್ಯಾನ್ ಮುಂದಾದರು. ಪಿಪಿಇ ಕಿಟ್ ಧರಿಸಿ, ಆಂಬುಲೆನ್ಸ್ ಏರಿದರು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೋಂಕಿತನನ್ನು ದಾಖಲು ಮಾಡಿ, ಹೊಸನಗರಕ್ಕೆ ಹಿಂತಿರುಗಿದ್ದಾರೆ
ಸುರೇಂದ್ರ ಕೋಟ್ಯಾನ್ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕರೋನ ಅಂದರೆ ಭೀತಿ ಇದೆ, ಸೋಂಕಿತರ ಆರೈಕೆಗೆ ಕುಟುಂಬದವರೆ ಬಾರದ ಉದಾಹರಣೆಗಳು ಇದ್ದಾವೆ. ಈ ಮಧ್ಯೆ ಜನಪ್ರತಿನಿಧಿಯೊಬ್ಬರು ಸೋಂಕಿತನ ಜೀವ ಉಳಿಸಲು ನೆರವಾಗಿದ್ದು ಮಾದರಿ ಅನಿಸಿದೆ.
ಇನ್ಮುಂದೆ ಕರೋನ ಪರೀಕ್ಷೆ ನಿಮ್ಮ ಮನೆಯಲ್ಲೇ ಆಗುತ್ತೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೆ ಏರಿಯಾದಿಂದ ಕರೆ ಮಾಡಿ. ಪರೀಕ್ಷೆಗೆ ನಿಮ್ಮ ಮನೆಗೆ ಬರ್ತಾರೆ ತಜ್ಞರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]