ಪಿಂಚಣಿಗಾಗಿ ಕಾದು ಸುಸ್ತಾಗಿ ಬಿದ್ದ ವೃದ್ಧೆ ಮನೆಗೆ ತಹಶೀಲ್ದಾರ್ ಭೇಟಿ, ವಿಎಗೆ ನೊಟೀಸ್ ಜಾರಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | HOSANAGARA | 21 ಜೂನ್ 2022

ಸಾಮಾಜಿಕ ಭದ್ರತಾ ಪಿಂಚಣಿ ಪಡೆಯಲು ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಆಗಮಿಸಿದ್ದ ವೇಳೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದ ಹೊಸನಗರ ತಾಲೂಕು ಹೆಬ್ಬಿಗೆ ಗ್ರಾಮದ ಸಾಧಮ್ಮ ಅವರ ಮನೆಗೆ ತೆರಳಿ ತಹಶೀಲ್ದಾರ್ ವಿ.ಎಸ್.ರಾಜೀವ್ ಅವರು ಪಿಂಚಣಿಯ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಿದರು.

Shimoga Nanjappa Hospital

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರ ಸೂಚನೆಯಂತೆ ಫಲಾನುಭವಿಯ ಮನೆಗೆ ತೆರಳಿದ ತಹಶೀಲ್ದಾರ್ ಅವರು, ಪತ್ರವನ್ನು ಹಸ್ತಾಂತರಿಸಿ ಆರೋಗ್ಯ ವಿಚಾರಿಸಿದರು.

ವಿಳಂಬ ಮಾಡಿದರೆ ಕ್ರಮ

ಸಾಮಾಜಿಕ ಭದ್ರತಾ ಪಿಂಚಣಿ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ವಿಳಂಬ ಮಾಡುವವರ ವಿರುದ್ಧ ಕ್ರಮವನ್ನು ಜರುಗಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

ಸಂಬಂಧಪಟ್ಟ ನಿಟ್ಟೂರು ಗ್ರಾಮ ಲೆಕ್ಕಾಧಿಕಾರಿಗೆ ಈಗಾಗಲೇ ನೊಟೀಸ್ ಜಾರಿಗೊಳಿಸಲಾಗಿದ್ದು, ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ ತಿಳಿಸಿದ್ದಾರೆ.

ನೊಟೀಸ್’ನಲ್ಲಿ ಏನಿದೆ?

ನಿಟ್ಟೂರು ಗ್ರಾಮ ಪಂಚಾಯಿತಿಯ ಗ್ರಾಮ ಲೆಕ್ಕಾಧಿಕಾರಿ ಡಿ.ಪಿ.ಮಂಜಪ್ಪ ಅವರಿಗೆ ಹೊಸನಗರ ತಹಶೀಲ್ದಾರ್ ವಿ.ಎಸ್.ರಾಜೀವ್ ಅವರು ಕಾರಣ ಕೇಳಿ ನೊಟೀಸ್ ಜಾರಿ ಮಾಡಿದ್ದಾರೆ. ‘ಪಿಂಚಣಿ ಮಾಡಿಸಲು ವೃದ್ಧೆ 7 ಕಿ.ಮೀ ನಡೆದು ಬಂದಿದ್ದಾರೆ. ಮದ್ಯಾಹ್ನ 1 ಗಂಟೆಯಾದರೂ ತಾವು ಗ್ರಾಮ ಕಚೇರಿಗೆ ಆಗಮಿಸಿರಲಿಲ್ಲ. ವೃದ್ಧೆ ಅಸ್ವಸ್ಥರಾಗಿದ್ದರಿಂದ ಗ್ರಾಮ ಪಂಚಾಯಿತಿ ಸದಸ್ಯರು, ಸಾರ್ವಜನಿಕರು ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.’

‘ನೀವು ನಿಮ್ಮ ಗ್ರಾಮ ಲೆಕ್ಕಾಧಿಕಾರಿ ವೃತ್ತದಲ್ಲಿ ಅನಧಿಕೃತ ಗೈರು ಹಾಜರಾಗಿರುವುದು ಮತ್ತು ಸರ್ಕಾರಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದೀರ. ನಿಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳಿಗೆ ಏಕೆ ಶಿಫಾರಸು ಮಾಡಬಾರದು ಎಂಬುದಕ್ಕೆ 24 ಗಂಟೆಯೊಳಗೆ ಉತ್ತರ ಕೊಡಿ’ ಎಂದು ನೊಟೀಸ್’ನಲ್ಲಿ ಪ್ರಶ್ನಿಸಲಾಗಿದೆ.

ಇದನ್ನೂ ಓದಿ – ಪಿಂಚಣಿಗಾಗಿ ಕಾದು ಕಾದು ಕಚೇರಿ ಮುಂದೆಯೇ ಕುಸಿದು ಬಿದ್ದ ವೃದ್ಧೆ

whatsapp-Group-Scan.jpg

whatsapp-smg-live

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 21, 2022

ಉಷಾ ನರ್ಸಿಂಗ್‌ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್‌ ಡಿಟೇಲ್ಸ್‌

ಉಷಾ ನರ್ಸಿಂಗ್‌ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್‌ ಡಿಟೇಲ್ಸ್‌

ರಂಗಾಯಣದಲ್ಲಿ ನಾಟಕ ನಿರ್ದೇಶಕ, ಸಹಾಯಕ ನಿರ್ದೇಶಕರಿಂದ ಅರ್ಜಿ ಆಹ್ವಾನ

ರಂಗಾಯಣದಲ್ಲಿ ನಾಟಕ ನಿರ್ದೇಶಕ, ಸಹಾಯಕ ನಿರ್ದೇಶಕರಿಂದ ಅರ್ಜಿ ಆಹ್ವಾನ

ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

ಬಟ್ಟೆಯೊಳಗೆ ಚೇಳು ನುಗ್ಗಿದೆ ಅಂತಾ ಗೆಳತಿ ಮನೆಗೆ ಹೋದ ಮಹಿಳೆ, ಆಮೇಲೆ ಗೆಳತಿಗೆ ಕಾದಿತ್ತು ಶಾಕ್

ಬಟ್ಟೆಯೊಳಗೆ ಚೇಳು ನುಗ್ಗಿದೆ ಅಂತಾ ಗೆಳತಿ ಮನೆಗೆ ಹೋದ ಮಹಿಳೆ, ಆಮೇಲೆ ಗೆಳತಿಗೆ ಕಾದಿತ್ತು ಶಾಕ್

ಸೋಮಿನಕೊಪ್ಪದಲ್ಲಿ ಜಾನಪದ ಸಮ್ಮೇಳನ, ಅಹೋರಾತ್ರಿ ಕಾರ್ಯಕ್ರಮ, ಏನೇನೆಲ್ಲ ಇರಲಿದೆ?

ಸೋಮಿನಕೊಪ್ಪದಲ್ಲಿ ಜಾನಪದ ಸಮ್ಮೇಳನ, ಅಹೋರಾತ್ರಿ ಕಾರ್ಯಕ್ರಮ, ಏನೇನೆಲ್ಲ ಇರಲಿದೆ?

ವಿದ್ಯುತ್‌ ಬೇಲಿಗೆ ಹಸು ಬಲಿ, ಸಾಕ್ಷ್ಯ ನಾಶಕ್ಕೆ ನಡೆದಿತ್ತಾ ಪ್ಲಾನ್?‌

ವಿದ್ಯುತ್‌ ಬೇಲಿಗೆ ಹಸು ಬಲಿ, ಸಾಕ್ಷ್ಯ ನಾಶಕ್ಕೆ ನಡೆದಿತ್ತಾ ಪ್ಲಾನ್?‌

ತ್ಯಾವರೆಕೊಪ್ಪ ಮೃಗಾಲಯದಲ್ಲಿ ವೈದ್ಯೆ ಸಾವು, ಮಿನಿಸ್ಟರ್‌ ಗರಂ, ಖಡಕ್‌ ಸೂಚನೆ, ಏನದು?

ತ್ಯಾವರೆಕೊಪ್ಪ ಮೃಗಾಲಯದಲ್ಲಿ ವೈದ್ಯೆ ಸಾವು, ಮಿನಿಸ್ಟರ್‌ ಗರಂ, ಖಡಕ್‌ ಸೂಚನೆ, ಏನದು?

Leave a Comment