ಶಿವಮೊಗ್ಗ ಲೈವ್.ಕಾಂ | SAGARA NEWS | 18 ಜುಲೈ 2020
ಸಾಗರ ತಾಲೂಕಿನಲ್ಲಿ ಶುಕ್ರವಾರ ಏಳು ಮಂದಿಗೆ ಕರೋನ ಸೋಂಕು ತಗುಲಿರುವು ದೃಢವಾಗಿದೆ. ಈ ಪೈಕಿ ಮೂವರಿಗೆ ಲಾರಿ ಚಾಲಕರೊಬ್ಬರಿಂದ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರಿಗೆಲ್ಲ ಸೋಂಕು ತಗುಲಿದೆ?
ಚಾಲಕನಿಂದ ಮೂವರಿಗೆ ಸೋಂಕು | ಆನಂದಪುರದಲ್ಲಿ ಲಾರಿ ಚಾಲಕರೊಬ್ಬರಿಗೆ ಕರೋನ ಸೋಂಕು ತಗುಲಿತ್ತು. ಮೂರು ದಿನದ ಹಿಂದೆ ಇದು ದೃಢವಾಗಿತ್ತು. ಈಗ ಚಾಲಕನ ಪುತ್ರ, ಸೊಸೆ ಮತ್ತು ಮೊಮ್ಮಗನಿಗೆ ಕರೋನ ಸೋಂಕು ತಗುಲಿದೆ.
ಮತ್ತೊಂದೆಡೆ ಸಾಗರದ ಗುಲಾಬ್ ನಬೀ ರಸ್ತೆಯಲ್ಲಿ 60 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ತಗುಲಿದೆ. ಇವರ 40 ವರ್ಷದ ಮಗನಿಗೆ ಗುರುವಾರ ಸೋಂಕು ದೃಢವಾಗಿತ್ತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]