ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 AUGUST 2023
BYKODU : ‘ಆಧಾರ ನೀನೆ ಎಂದು ಲೋಕ ನಂಬಿದೆʼ ಎಂಬ ಗೀತೆಯಂತೆ ಎಲ್ಲ ಸರ್ಕಾರಿ ಸೌಲಭ್ಯ ಪಡೆಯಲು ಸರ್ಕಾರ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಆದರೆ ಆಧಾರ್ ಕಾರ್ಡ್ ನೀಡುವ ಜವಾಬ್ದಾರಿ ಹೊತ್ತ ನೋಂದಣಿ ಕೇಂದ್ರಗಳು (Registration Centre) ಮಾತ್ರ ಮೂಲ ಸೌಕರ್ಯದ ಸಮಸ್ಯೆ ಎದುರಿಸುತ್ತಿದೆ. ಹಾಗಾಗಿ ಶರಾವತಿ ಹಿನ್ನೀರು (Sharavati Backwater) ಭಾಗದ ಜನರು ಪರದಾಡುವಂತಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕರೂರು ಹೋಬಳಿ ವ್ಯಾಪ್ತಿಯ ಸುಳ್ಳಳ್ಳಿ ಮತ್ತು ತುಮರಿಯಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಕೇಂದ್ರವಿದೆ. ಆದರೆ ಆಡಳಿತದ ನಿರ್ಲಕ್ಷ್ಯದಿಂದ ಇವುಗಳು ಕೆಟ್ಟು ನಿಂತಿದ್ದು, ಜನರನ್ನು ಸಂಕಷ್ಟಕ್ಕೆ ಒಡ್ಡಿವೆ. ಬಯೋಮೆಟ್ರಿಕ್ ಯಂತ್ರದ ಅವ್ಯವಸ್ಥೆಯಿಂದಾಗಿ ಮೂರು ತಿಂಗಳಿಂದ ಯಾವ ಕೆಲಸವು ಆಗದೆ ಕೇಂದ್ರಗಳು ಇದ್ದೂ ಉಪಯೋಗವಿಲ್ಲದಂತಾಗಿದೆ.
ನಿತ್ಯ ಅಲೆದಾಡುತ್ತಿರುವ ಹಿನ್ನೀರ ಜನ
ನಡುಗಡ್ಡೆಯ ದ್ವೀಪದ ಜನರು ಆಧಾರ್ ನೋಂದಣಿ, ತಿದ್ದುಪಡಿ, ದೂರವಾಣಿ ಸಂಖ್ಯೆ ಜೋಡಣೆ, ಇಕೆವೈಸಿ, ಗೃಹಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳ ನೋಂದಣಿಗಾಗಿ ಈ ಕೇಂದ್ರಗಳಿಗೆ ಬರುತ್ತಿದ್ದಾರೆ. ಆದರೆ ಸೇವೆ ಸ್ಥಗಿತಗೊಂಡಿರುವುದರಿಂದ ದೂರದ ಸಾಗರ, ಕುಂದಾಪುರ, ಹೊಸನಗರ, ಭಟ್ಕಳಕ್ಕೆ ನಿತ್ಯ ಅಲೆಯುತ್ತಿದ್ದಾರೆ. ಅಲ್ಲಿಗೆ ಹೋದರೆ ಆಯಾ ದಿನವೆ ತಮ್ಮ ಸರದಿ ಸಿಗದೆ ಮರು ದಿನ ಪುನಃ ತೆರಳುವಂತಾಗಿದೆ. ವೃದ್ಧರು, ಶಾಲಾ ಮಕ್ಕಳು, ಮಹಿಳೆಯರು, ವಿಕಲಚೇತನರು ನಿತ್ಯ ಅಲೆದಾಡುತ್ತಿದ್ದಾರೆ. ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 22 ಸಾವಿರ ಜನರ ಸೇವೆಗೆ ಒಂದೂ ಆಧಾರ್ ನೋಂದಾಣಿ ಕೇಂದ್ರವಿಲ್ಲದಿರುವುದು ವಿಪರ್ಯಾಸ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮಳೆ ಮಾಯ, ಭತ್ತ ನಾಟಿಗೆ ನೀರಿಲ್ಲ, ಹೊಲದಲ್ಲೆ ಒಣಗಿದ ಮೆಕ್ಕೆಜೋಳ, ಈ ಮಧ್ಯೆ ರೈತರಿಗೀಗ ಹೊಸ ಸಂಕಷ್ಟ
ಡಿಜಿಟಲ್ ಸೇವೆ ಕಡ್ಡಾಯಗೊಳಿಸಿರುವ ಸರ್ಕಾರ ಅಗತ್ಯ ಸೌಲಭ್ಯ ಒದಗಿಸುತ್ತಿಲ್ಲ. ಪ್ರತಿ ಸರ್ಕಾರಿ ಸವಲತ್ತು ಪಡೆಯಲು ಹಿನ್ನೀರಿನ ಜನರು ಪ್ರತಿಭಟನೆ, ಹೋರಾಟದ ಹಾದಿ ಹಿಡಿಯಬೇಕಾಗಿದೆ. ಸಾರಿಗೆ, ನೆಟ್‌ವರ್ಕ್ ಸೇವೆ, ಪಡಿತರ, ಇಕೆವೈಸಿ ಸೇರಿದಂತೆ ಅಗತ್ಯ ಸೇವೆಗಾಗಿ ಪರದಾಡುವಂತಾಗಿದೆ.
ಬ್ಯಾಟರಿ, ಎಲೆಕ್ಟ್ರಾನಿಕ್ ಉಪಕರಣಗಳಿಲ್ಲ
ಭೂ ದಾಖಲೆ ಸೇರಿದಂತೆ ಜನರಿಗೆ ಅಗತ್ಯ ಸೇವೆಯನ್ನು ಡಿಜಿಟಲ್ ರೂಪದಲ್ಲಿ ನೀಡಲು ಸರ್ಕಾರ ಹೋಬಳಿಗೆ ಒಂದು ನಾಡ ಕಛೇರಿ ತೆರೆದಿದೆ. ಆದರೆ ಕಚೇರಿಗೆ ಅಗತ್ಯವಿರುವ ಬ್ಯಾಟರಿ, ಎಲೆಕ್ಟ್ರಾನಿಕ್ ಉಪಕರಣಗಳನ್ನು ಸರಿಯಾಗಿ ಪೂರೈಸಿಲ್ಲ. ಇನ್ನು, ಯೋಜನೆಗಳ ನೋಂದಣಿ ಕಮಿಷನ್ ಪಾವತಿಯಾಗದೆ ಗ್ರಾಮ ಒನ್ ಸಿಬ್ಬಂದಿ ಸಂಕಷ್ಟಕೀಡಾಗಿದ್ದಾರೆ. ಹೋಬಳಿಯಲ್ಲಿ ಎರಡು ಗ್ರಾಮ ಒನ್ ಕೇಂದ್ರಗಳಿದ್ದರೂ ಸರ್ವರ್ ಸಮಸ್ಯೆಯಿಂದ ಸೊರಗುತ್ತಿವೆ.