ಸಿನಿಮಾ ನಟಿ ಮೇಲೆ ಸಾಗರದಲ್ಲಿ ಹಲ್ಲೆ ಆರೋಪ, ಆಸ್ಪತ್ರೆಗೆ ದಾಖಲು, ಏನಿದು ಕೇಸ್?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 4 JULY 2023

ANANDAPURA : ಭೂ ವಿವಾದ ಸಂಬಂಧ ಸಿನಿಮಾ ನಟಿ (Actress) ಮತ್ತು ಆಕೆಯ ತಂದೆಯ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಟಿ ಚಿಕಿತ್ಸೆ ಪಡೆದಿದ್ದಾರೆ.

SMG-LIVE-JUNE-VIEWS

ನಟಿ ಅನಿತಾ ಗೌಡ ಮತ್ತು ಆಕೆಯ ತಂದೆ ಶ್ರೀನಿವಾಸ ಗೌಡ ಅವರ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಲಾಗಿದೆ. ಆನಂದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಏನಿದು ಪ್ರಕರಣ?

ಸಾಗರ ತಾಲೂಕು ಕಾಸ್ಪಾಡಿ ಗ್ರಾಮದ ಸರ್ವೇ ನಂಬರ್‌ 43ರ ಜಮೀನು ಸಂಬಂಧ ಶ್ರೀನಿವಾಸ ಗೌಡ ಮತ್ತು ಮೋಹನ್‌ ಎಂಬವವರಿಗೆ ವಿವಾದವಿದೆ. ಜೂ.30ರಂದು ನಟಿ ಅನಿತಾ ಗೌಡ ಮತ್ತು ಶ್ರೀನಿವಾಸ ಗೌಡ ಅವರು ಜಮೀನಿನಲ್ಲಿ ಕೆಲಸ ಮಾಡುವಾಗ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

Actress-Anitha-Gowda-attacked-in-Sagara.

ಅನಿತಾ ಗೌಡ ಕನ್ನಡ ಮತ್ತು ತಮಿಳು ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ (Actress). ಹುಡುಗರು, ಕೆಂಪೇಗೌಡ, ದಂಡಂ ದಶಗುಣಂ, ಬೃಂದಾವನ ಸೇರಿದಂತೆ ಕನ್ನಡ ಸಿನಿಮಾಗಳಲ್ಲಿ ಪಾತ್ರ ಮಾಡಿದ್ದಾರೆ.  ‌

ಇದನ್ನೂ ಓದಿ – ಶಿವಮೊಗ್ಗದಲ್ಲಿ ಆರೋಪಿ ಕಾಲಿಗೆ ಗುಂಡು ಹೊಡೆದ ಪೊಲೀಸರು, ಯಾರದು ಆರೋಪಿ? ಗುಂಡು ಹಾರಿಸಿದ್ದೇಕೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment