ಶಿವಮೊಗ್ಗ ಲೈವ್.ಕಾಂ | ANANDAPURA NEWS | 25 MAY 2021
ಕಠಿಣ ಲಾಕ್ ಡೌನ್ ಜಾರಿಗು ಮೊದಲು ಆನಂದಪುರದಲ್ಲಿ ಭಾರಿ ಜನ ಸಂಚಾರ ಕಂಡು ಬಂದಿದೆ. ಅಗತ್ಯ ವಸ್ತುಗಳ ಖರೀದಿಗೆ ಅಂಗಡಿಗಳ ಮುಂದೆ ಜನರು ಮುಗಿಬಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ, ಆನಂದಪುರದಲ್ಲಿ ಒಂದು ವಾರ ಲಾಕ್ ಡೌನ್ ಘೋಷಿಸಲಾಗಿದೆ. ಮೇ 25ರ ಬೆಳಗ್ಗೆ 10 ಗಂಟೆಯಿಂದ ಲಾಕ್ ಡೌನ್ ಜಾರಿಯಾಗಲಿದೆ.
ಇದೆ ಕಾರಣಕ್ಕೆ ಸುತ್ತಮುತ್ತಲ ಜನರು ಇನ್ನೊಂದು ವಾರಕ್ಕೆ ಆಗುವಷ್ಟು ಅಗತ್ಯ ವಸ್ತುಗಳ ಖರೀದಿಗೆ ಪಟ್ಟಣಕ್ಕೆ ಬಂದಿದ್ದರು. ಕೋವಿಡ್ ನಿಯಮ ಗಾಳಿ ತೂರಿ ಖರೀದಿಗೆ ಮುಂದಾದರು.
ದಿನಸಿ ಅಂಗಡಿಗಳ ಮುಂದೆ ಭಾರಿ ಜನ ಜಂಗುಳಿ ಕಂಡು ಬಂತು. ಸಾಮಾಜಿಕ ಅಂತರವಿರಲಿಲ್ಲ. ಕೆಲವು ಮಾಸ್ಕ್ ಕೂಡ ಧರಿಸದೆ ಪಟ್ಟಣದಲ್ಲಿ ಓಡಾಡುತ್ತಿದ್ದರು. ಪಟ್ಟಣ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆಯು ಹೆಚ್ಚಿತ್ತು. ಆನಂದಪುರ ಭಾಗದಲ್ಲಿ ಕರೋನ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸ್ವಲ್ಪ ಯಾಮಾರಿದರೂ ಲಾಕ್ ಡೌನ್ ಮುನ್ನ ಸೋಂಕು ಮನೆಗೆ ಕೊಂಡೊಯ್ದಂತೆ ಆಗಲಿದೆ.
ಇದನ್ನೂ ಓದಿ | ಆನಂದಪುರದಲ್ಲಿ ಒಂದು ವಾರ ಕಠಿಣ ಲಾಕ್ ಡೌನ್, ಏನಿರುತ್ತೆ? ಏನಿರಲ್ಲ?
ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಸಾಗರ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ನೇತೃತ್ವದಲ್ಲಿ ಸಭೆ ನಡೆಸಿ ಲಾಕ್ ಡೌನ್‍ಗೆ ನಿರ್ಧರಿಸಲಾಗಿತ್ತು. ಇವತ್ತಿನಿಂದ ಆನಂದಪುರ ಸಂಪೂರ್ಣ ಲಾಕ್ ಆಗಲಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]