ಆನಂದಪುರದಲ್ಲಿ ಒಂದು ವಾರ ಕಠಿಣ ಲಾಕ್ ಡೌನ್, ಏನಿರುತ್ತೆ? ಏನಿರಲ್ಲ?

ಶಿವಮೊಗ್ಗ ಲೈವ್.ಕಾಂ | ANANDAPURA NEWS | 24 MAY 2021

ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸಾಗರ ತಾಲೂಕು ಆನಂದಪುರದಲ್ಲಿ ಒಂದು ವಾರ ಕಠಿಣ ಲಾಕ್‍ ಡೌನ್ ಮಾಡಲು ನಿರ್ಧರಿಸಲಾಗಿದೆ.

ಸಾಗರ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮೇ 25ರಿಂದು ಒಂದು ವಾರ ಸಂಪೂರ್ಣ ಲಾಕ್‍ ಡೌನ್ ಮಾಡಲಾಗುತ್ತಿದೆ.

ಲಾಕ್‍ ಡೌನ್ ಅವಧಿಯಲ್ಲಿ ಜನರು ಅನಗತ್ಯವಾಗಿ ರಸ್ತಗಿಳಿಯುವಂತಿಲ್ಲ. ವ್ಯಾಪಾರ, ವಹಿವಾಟಿಗೂ ಅವಕಾಶವಿಲ್ಲ. ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ತುರ್ತು ಸಂದರ್ಭದ ಓಡಾಟಕ್ಕೆ ಅವಕಾಶವಿದೆ.

ಇನ್ನು, ಲಾಕ್ ಡೌನ್ ಸಂದರ್ಭ ಕೃಷಿ ಚಟುವಟಿಕೆಗೆ ಯಾವುದೆ ನಿರ್ಬಂಧವಿಲ್ಲ. ಆದರೆ ಎಲ್ಲಿಯೂ ಜನರು ಗುಂಪುಗೂಡುವಂತಿಲ್ಲ ಎಂದು ತಹಶೀಲ್ದಾರ್ ಅವರು ಸಭೆಯಲ್ಲಿ ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವರು ಸಭೆಯಲ್ಲಿದ್ದರು.

April Reach Shivamogga Live

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment