ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಜುಲೈ 2020
ದಿನೇ ದಿನೇ ಕರೋನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಲುವಾಗಿ, ಒಂದು ವಾರ ಸಾಗರದ ಕೈಗಾರಿಕಾ ಸಂಕೀರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ. ಜುಲೈ 9ರಿಂದ ಸಂಕೀರ್ಣ ಬಂದ್ ಆಗಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸ್ವಯಂ ಪ್ರೇರಿತ ಬಂದ್
ಮಲೆನಾಡು ಸಣ್ಣ ಕೈಗಾರಿಕೆ ಮಾಲೀಕರು ಮತ್ತು ಕಾರ್ಮಿಕರ ಸಂಘದ ವತಿಯಂದ ಸ್ವಯಂ ಪ್ರೇರಿತ ಬಂದ್ಗೆ ನಿರ್ಧರಿಸಲಾಗಿದೆ. ಇಲ್ಲಿನ ಕೈಗಾರಿಕಾ ವಸಾಹತು, ಆಟೋ ಕಾಂಪ್ಲೆಕ್ಸ್, ಮಂಗಳಬೀಸು ಕೈಗಾರಿಕಾ ಪ್ರದೇಶದಲ್ಲಿ ಸ್ವಯಂ ಪ್ರೇರಿತ ಬಂದ್ ಮಾಡಲಾಗುತ್ತಿದೆ.
ಸರ್ಕಾರಿ ವಾಹನಗಳಷ್ಟೇ ರಿಪೇರಿ
ಆಟೋ ಕಾಂಪ್ಲೆಕ್ಸ್ನಲ್ಲೂ ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ನಿರ್ಧರಿಸಿದ್ದಾರೆ. ಆದರೆ ಸರ್ಕಾರದ ವಾಹನಗಳನ್ನು ಮಾತ್ರ ರಿಪೇರಿ ಮಾಡಲಾಗುತ್ತದೆ. ಇದರಿಂದ ತುರ್ತು ಸೇವೆಗಳಿಗೆ ಅನುಕೂಲ ಆಗಲಿದೆ.
ಅಧ್ಯಕ್ಷರು ಏನಂತಾರೆ?
ಹೊರಗಡೆಯ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಾಂಪ್ಲೆಕ್ಸ್ಗೆ ಬರುತ್ತವೆ. ನಮ್ಮ ದುಡಿಮೆಗೆ ತೊಂದರೆ ಆದರೂ ಸಹಿತ ಕರೋನ ನಿಯಂತ್ರಣ ಮಾಡುವ ಅಗತ್ಯವಿದೆ. ಹಾಗಾಗಿ ಒಂದು ವಾರ ಸ್ವಯಂ ಬಂದ್ ಮಾಡುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷ ಶಿವಾನಂದ್ ತಿಳಿಸಿದ್ದಾರೆ.
ಆತಂಕ ಮೂಡಿಸಿದ್ದ ನೌಕರ
ಮಂಗಳಬೀಸು ಕೈಗಾರಿಕಾ ಪ್ರದೇಶದಲ್ಲಿ ಇರುವ ಗಾರ್ಮೆಂಟ್ಸ್ ಒಂದರ ನೌಕರನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದರಿಂದ ಕೈಗಾರಿಕಾ ಪ್ರದೇಶದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು.
ಸಾಗರ ನಗರದ ವರ್ತಕರು ಈಗಾಗಲೇ ಮಧ್ಯಾಹ್ನ ಮೂರು ಗಂಟೆಗೆ ಅಂಗಡಿ ಬಂದ್ ಮಾಡಲು ನಿರ್ಧಾರ ಪ್ರಕಟಿಸಿದ್ದಾರೆ. ಸವಿತಾ ಸಮಾಜ, ಬೆಳ್ಳಿ ಬಂಗಾರದ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ಪೂರ್ಣ ಬಂದ್ ಮಾಡಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]