ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA | 23 ಅಕ್ಟೋಬರ್ 2019
ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಸಾಗರದ ಎಲ್.ಬಿ.ಕಾಲೇಜು ವಿದ್ಯಾರ್ಥಿಯೊಬ್ಬರು ಅತ್ಯಂತ ಅಪರೂಪದ ಬಾಂಬೆ ಗ್ರೂಪ್ ರಕ್ತವನ್ನು ದಾನ ಮಾಡಿದ್ದಾರೆ. ಈ ಗ್ರೂಪ್’ನ ರಕ್ತ ತುಂಬಾನೆ ಅಪರೂಪ ಎಂದು ವೈದ್ಯರು ತಿಳಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಾಗರದ ಎಲ್.ಬಿ.ಕಾಲೇಜಿನಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರ ನಡೆದಾಗ ಬಿಎಸ್ಸಿ ವಿದ್ಯಾರ್ಥಿ ಉದಯ್ ಕುಮಾರ್ ಅವರ ರಕ್ತದ ಮಾದರಿ ಅತ್ಯಂತ ಅಪರೂಪದ್ದು ಎಂದು ತಿಳಿದು ಬಂದಿದೆ. ಇದರ ಮಾಹಿತಿಯನ್ನು ಸಂಕಲ್ಪ ಆನ್’ಲೈನ್ ಎಂಬ ವೆಬ್’ಸೈಟ್’ನಲ್ಲಿ ಪ್ರಕಟಿಸಲಾಗಿತ್ತು.
ಈ ಮಾಹಿತಿ ತಿಳಿಯುತ್ತಿದ್ದಂತೆ ಬೆಂಗಳೂರಿನ ರೋಗಿಯೊಬ್ಬರಿಗೆ ಇದೆ ಮಾದರಿಯ ರಕ್ತದ ಅಗತ್ಯವಿದೆ ಎಂದು ತಿಳಿದು ಬಂದಿದೆ. ರೋಗಿಯ ಕುಟುಂಬದವರು ಸಾಗರಕ್ಕೆ ಆಗಮಿಸಿ ಉದಯ್ ಕುಮಾರ್ ಅವರಿಂದ ರಕ್ತ ಪಡೆದಿದ್ದಾರೆ. ರಕ್ತನಿಧಿ ಕೇಂದ್ರದ ಡಾ.ಬಿ.ಜಿ.ಸಂಗಂ, ಸಂಸ್ಥೆಯ ಪ್ರಮುಖರಾದ ಹರೀಶ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]