ಸಿಗಂದೂರು ದೇವಸ್ಥಾನದ ಭಕ್ತರ ಮೇಲೆ ಕ್ಯಾಂಟೀನ್‌ ಮಾಲೀಕರಿಂದ ಹಲ್ಲೆ ಆರೋಪ, ಕಾರಣವೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಸಾಗರ: ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಮುಂಭಾಗದ ಕ್ಯಾಂಟೀನ್‌ನಲ್ಲಿ ನೀರು ಚೆಲ್ಲಿದ ವಿಚಾರಕ್ಕೆ ಸಂಬಂಧಿಸಿದಂತೆ ಭಕ್ತರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ತುಮಕೂರಿನಿಂದ ಸಿಗಂದೂರು ದೇವಸ್ಥಾನಕ್ಕೆ ಬಂದಿದ್ದ ತಿಮ್ಮಯ್ಯ (65) ಹಾಗೂ ಅವರ ಸಂಬಂಧಿಕರು ಜೂನ್ 9ರಂದು ಸಂಜೆ ದರ್ಶನ ಮುಗಿಸಿ ಊರಿಗೆ ಮರಳಲು ಬಸ್ ನಿಲ್ದಾಣಕ್ಕೆ ಬರುತ್ತಿದ್ದರು. ಈ ವೇಳೆ ದೇವಸ್ಥಾನದ ಮುಂಭಾಗದ ಸಾಲಿನಲ್ಲಿದ್ದ ಕ್ಯಾಂಟೀನ್‌ನಲ್ಲಿ ಬಜ್ಜಿ ತಿಂದು, ಕೈ ತೊಳೆದಿದ್ದಾರೆ.

Kargal-Police-Station-Sagara-Taluk

ಕೈ ತೊಳೆದ ನೀರು ಕ್ಯಾಂಟೀನ್ ಒಳಗೆ ಬಂದಿದೆ ಎಂದು ಆಕ್ಷೇಪಿಸಿದ ಹೋಟೆಲ್ ಮಾಲೀಕ, ಭಕ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.   ಗಾಯಾಳುಗಳು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.