ಸಾಗರದಲ್ಲಿ ಹೆಗ್ಗೋಡಿನ ಚರಕಕ್ಕೆ ಸಿಕ್ತು ಮರು ಚಾಲನೆ, ಸರ್ಕಾರದಿಂದ ಸೌಲಭ್ಯ ಒದಗಿಸುವ ಭರವಸೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

119909669 961055577707686 682068807956211504 n.jpg? nc cat=103& nc sid=8024bb& nc ohc=Fu OV qGO6UAX Phl Y& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SAGARA NEWS | 3 ಅಕ್ಟೋಬರ್ 2020

ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿ ಸ್ಥಗಿತಗೊಂಡಿದ್ದ ಹೆಗ್ಗೋಡಿನ ಚರಕ ಮಹಿಳಾ ವಿವಿದ್ದೋದ್ದೇಶ  ಸಹಕಾರ ಸಂಘಕ್ಕೆ ಗಾಂಧಿ ಜಯಂತಿಯಂದು ಮರಚಾಲನೆ ನೀಡಲಾಗಿದೆ. ನೂತನ ಕಟ್ಟಡವನ್ನೂ ಉದ್ಘಾಟಿಸಲಾಯಿತು.

ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಚರಕಕ್ಕೆ ಮರು ಚಾಲನೆ ನೀಡಿದರು.

120491497 1230566673971417 6259903171965323555 o.jpg? nc cat=101& nc sid=8024bb& nc ohc=q68n 35dKtUAX8SO HB& nc ht=scontent.fblr1 4

ಈ ವೇಳೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಕರೋನ ಲಾಕ್‍ಡೌನ್‍ನಿಂದಾಗಿ ಸ್ಥಗಿತಗೊಂಡಿದ್ದ ಚರಕ ಮರುಚಾಲನೆ ಪಡೆಯುತ್ತಿದೆ. ಸಂಸ್ಥೆಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ರಂಗಕರ್ಮಿ ಪ್ರಸನ್ನ ಅವರು ಶ್ರಮವಹಿಸಿ ವ್ಯವಸ್ಥಿತವಾಗಿ ಚರಕ ಸಂಸ್ಥೆಯನ್ನು ಕಟ್ಟಿದ್ದಾರೆ. ಸರ್ಕಾರ ದೇಶಿಯ ಉತ್ಪನ್ನಗಳನ್ನು ತಯಾರಿಸುವವರಿಗೆ, ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳುವವರಿಗೆ ಎಲ್ಲಾ ರೀತಿಯ ಅನುಕೂಲ ನೀಡಬೇಕು ಎಂದರು.

120339820 1230566590638092 3546045816039256809 o.jpg? nc cat=106& nc sid=8024bb& nc ohc=ojVS9q4VZ80AX 1lQB& nc ht=scontent.fblr1 3

ಮೂಲೆಗದ್ದೆ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತ ಡಾ.ಉಪೇಂದ್ರ ಪ್ರತಾಪ್ ಸಿಂಗ್, ಚರಕ ಸಂಸ್ಥೆ ಅಧ್ಯಕ್ಷೆ ಗೌರಮ್ಮ, ಕಾರ್ಯದರ್ಶಿ ಎಂ.ವಿ.ಪ್ರತಿಭಾ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಉಪಸ್ಥಿತರಿದ್ದರು.

119042982 954233958389848 2251827388540787956 o.jpg? nc cat=100& nc sid=8024bb& nc ohc=M11J4AM3B1UAX wbglB& nc ht=scontent.fixe1 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment