ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA | 10 ಅಕ್ಟೋಬರ್ 2019
ಇಲ್ಲಿ ಬಿದ್ದು ಗಾಯಗೊಂಡವರಿಗೆ ಲೆಕ್ಕವಿಲ್ಲ. ಜಗದ್ವಿಖ್ಯಾತ ಜೋಗ ಜಲಪಾತದ ಹಾದಿಯಲ್ಲಿ ಬರಿ ಗುಂಡಿಗಳೋ ಗುಂಡಿಗಳು.. ರಸ್ತೆ ಗುಂಡಿ ಮುಂದೆ ಯುವಕರ ಡಿಫರೆಂಟ್ ಪ್ರತಿಭಟನೆ.
ಸಾಗರ ತಾಳಗುಪ್ಪ ನಡುವೆ ಗಾಳಿಪುರ ಸೇತುವೆ ಬಳಿ ರಸ್ತೆಯಲ್ಲಿ ಭಾರಿ ಗುಂಡಿಗಳಾಗಿವೆ. ಇವುಗಳಿಂದಾಗಿ ಜಾರಿಬಿದ್ದು ಹಲವು ದ್ವಿಚಕ್ರ ವಾಹನ ಸವಾರರು ಗಾಯಗೊಂಡಿದ್ದಾರೆ. ಗುಂಡಿಗಳಿಗೆ ಮುಕ್ತಿ ನೀಡುವಂತೆ ಅಧಿಕಾರಿಗಳಿಗೆ ಎಷ್ಟೆ ಮನವಿ ಮಾಡಿದರು ಪ್ರಯೋಜವಾಗಿಲ್ಲ. ಹಾಗಾಗಿ ಸ್ಥಳೀಯ ಯುವಕರು ಗುಂಡಿ ಮುಂದೆ ನಿಂತು ಡಿಫರೆಂಟ್ ಪ್ರತಿಭಟನೆ ಮಾಡಿದ್ದಾರೆ.
ಗುಂಡಿಗಳಲ್ಲಿ ದೊಡ್ಡ ಕಂಬ ನೆಟ್ಟು, ಅದಕ್ಕೆ ಅಲಂಕಾರ ಮಾಡಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೆ ಪದೆ ಬೈಕ್ ಸವಾರು ಬಿದ್ದು ಗಾಯಗೊಳ್ಳುತ್ತಿದ್ದರು ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಹಾಗಾಗಿ ವಾಹನ ಸವಾರರಿಗೆ ಜಾಗೃತಿ ಮೂಡಿಸಲು ವಿಭಿನ್ನ ಪ್ರತಿಭಟನೆ ನಡೆಸಲಾಗಿದೆ ಎಂದು ಯುವಕರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 206ರ ಮೂಲಕ ಜೋಗ ಜಲಪಾತಕ್ಕೆ ತಲುಪಬಹುದಾಗಿದೆ. ಹಾಗಾಗಿ ಪ್ರತಿದಿನ ಸಾವಿರಾರು ಪ್ರವಾಸಿಗರು ಈ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಗುಂಡಿಯಿಂದಾಗಿ ಪ್ರವಾಸಿಗರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಯುವಕರು ಶ್ರಮದಾನ ಮಾಡಿ, ಗುಂಡಿಗಳಿಗೆ ಮಣ್ಣು ತುಂಬಿದ್ದರು. ಆದರೆ ಕೆಲವೆ ದಿನದಲ್ಲಿ ರಸ್ತೆ ಮತ್ತೆ ಗುಂಡಿ ಬೀಳುತ್ತಿದೆ. ಇದನ್ನು ಕೂಡಲೆ ಮುಚ್ಚಬೇಕು ಎಂದು ಯುವಕರು ಒತ್ತಾಯಿಸಿದ್ದಾರೆ.
ಮಧುಚಂದ್ರ ಗಾಳಿಪುರ, ಮಂಜು ಪೂಜಾರಿ, ಅಭಿಷೇಕ್, ಸಚಿನ್ ದೊಡ್ಡಮನಿ, ಪ್ರವೀಣ್, ಸುದೀಪ್ ಗಾಳಿಪುರ, ಪ್ರಜ್ವಲ್, ಮಹೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422