ನಾಯಿಗಳ ದಾಳಿಯಿಂದ ಜಿಂಕೆಗೆ ಗಂಭೀರ ಗಾಯ, ಸಾವು

ಶಿವಮೊಗ್ಗ ಲೈವ್.ಕಾಂ | SAGARA NEWS | 13 ಜುಲೈ 2021➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಆಹಾರ ಅರಸಿ ಬಂದಿದ್ದ ಜಿಂಕೆಯೊಂದರ ಮೇಲೆ ನಾಯಿಗಳು ದಾಳಿ ಮಾಡಿದ್ದರಿಂದ  ಗಂಭೀರ ಗಾಯಗೊಂಡಿದ್ದ ಜಿಂಕೆ ಸಾವನ್ನಪ್ಪಿದೆ.

ಬ್ಯಾಕೋಡು ಸಮೀಪ ಕೋಡೂರಿನಲ್ಲಿ ಘಟನೆ ಸಂಭವಿಸಿದೆ. ಶಾಂತರಾಜು ಮತ್ತು ರಾಜು ಎಂಬುವವರ ಜಮೀನಿನ ಬಳಿಗೆ ಜಿಂಕೆ ಬಂದಿತ್ತು. ಅದನ್ನು ಗಮನಿಸಿದ ನಾಯಿಗಳು ದಾಳಿ ಮಾಡಿವೆ. ತಕ್ಷಣ ಜಮೀನು ಮಾಲೀಕರು ಜಿಂಕೆಯನ್ನು ರಕ್ಷಿಸಿ ಅರಣ್ಯಾಧಿಕಾರಿಳಿಗೆ ಮಾಹಿತಿ ನೀಡಿದ್ದರು.

ಆರ್‍ಎಫ್‍ಒ ಛಾಯಾ, ಫಾರೆಸ್ಟರ್ ಪ್ರಮೋದ್‍ ಮತ್ತು ನಾಗರಾಜ್ ಅವರ ತಂಡ ಜಿಂಕೆಯನ್ನು ಸಾಗರದ ಆಸ್ಪತ್ರೆ ಕರೆದೊಯ್ದರು. ಆದರೆ ಮಾರ್ಗ ಮಧ್ಯೆ ಜಿಂಕೆ ಸಾವನ್ನಪ್ಪಿದೆ. ಬಳಿಕ ಮರೋಣತ್ತರ ಪರೀಕ್ಷೆ ನಡೆಸಲಾಯಿತು.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

Leave a Comment