ಸಾಗರ: ಅಕ್ರಮ ಜಂಬಿಟ್ಟಿಗೆ ಕ್ವಾರಿ ಮೇಲೆ ದಾಳಿ ಮುಂದುವರೆಸಿರುವ ಸಾಗರ ತಹಶೀಲ್ದಾರ್, ಭಾನುವಾರ ತಾಳಗುಪ್ಪ ಹೋಬಳಿಯಲ್ಲಿ ಏಕಾಂಗಿಯಾಗಿ ದಾಳಿ ನಡೆಸಿದರು. ಕಾನ್ಲೆಯಲ್ಲಿ ಜಂಬಿಟ್ಟಿಗೆ ಕಲ್ಲು ಕ್ವಾರಿಯ ಮೇಲೆ ತಹಶೀಲ್ದಾರ್ ಡಾ. ಪ್ರತಿಭಾ.ಆರ್ ದಿಢೀರ್ ದಾಳಿ ನಡೆಸಿದರು. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಕಾನ್ಲೆ ಗ್ರಾಮದ ಜಮೀನು ಒಂದರಲ್ಲಿ ನಡೆಯುತ್ತಿದ್ದ ಕ್ವಾರಿ ಮೇಲೆ ದಾಳಿ ತಹಶೀಲ್ದಾರ್ ಡಾ. ಪ್ರತಿಭಾ ಏಕಾಂಗಿಯಾಗಿ ದಾಳಿ ನಡೆಸಿದರು. ತಹಶೀಲ್ದಾರ್ ಜೀಪ್ ಕಂಡು ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಪರಾರಿಯಾಗಿದ್ದಾರೆ. ಈ ವೇಳೆ ಜೆಸಿಬಿಯನ್ನು ಬೆನ್ನಟ್ಟಿ ಹಿಡಿದ ಅಧಿಕಾರಿಗಳು, ಅದನ್ನು ವಶಕ್ಕೆ ಪಡೆದಿದ್ದಾರೆ.
ತಹಶೀಲ್ದಾರ್‌ಗೆ ಗ್ರಾಮಸ್ಥರ ದೂರು
ಅಕ್ರಮ ಕಲ್ಲುಗಾಣಿಗಾರಿಕೆಯಿಂದ ದೊಡ್ಡ ಲಾರಿಗಳು ಊರಿನ ರಸ್ತೆಯಲ್ಲಿ ಸಂಚರಿಸುತ್ತಿವೆ. ಹಾಗಾಗಿ ರಸ್ತೆಗಳೆಲ್ಲ ಹಾಳಾಗಿವೆ. ಜನರು ಸಂಚರಿಸುವ ಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಈ ದಂಧೆಗೆ ಬ್ರೇಕ್ ಹಾಕಬೇಕು ಎಂದು ತಾಲೂಕು ಆಡಳಿತಕ್ಕೆ ಸಾರ್ವಜನಿಕರು ಒತ್ತಾಯಿಸಿದರು.
ಅಕ್ರಮ ಮರಳು ದಂಧೆ, ಜಂಬಿಟ್ಟಿಗೆ ಗಣಿಗಾರಿಕೆ ನಡೆಸುವುದು ಕಂಡು ಬಂದಲ್ಲಿ ಸಾರ್ವಜನಿಕರು ಮಾಹಿತಿ ನೀಡುವಂತೆ ತಹಶೀಲ್ದಾರ್ ಡಾ. ಪ್ರತಿಭಾ ತಿಳಿಸಿದ್ದಾರೆ. ದಾಳಿ ವೇಳೆ ಗ್ರಾಮ ಆಡಳಿತಾಧಿಕಾರಿ ಎಂ.ಜಿ. ನಾಯಕ್ ಇದ್ದರು.