ಶಿವಮೊಗ್ಗ ಲೈವ್.ಕಾಂ | SAGARA | 05 ಡಿಸೆಂಬರ್ 2019
ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ಬಂಧಿಸಿ 1 ಲಕ್ಷ ರೂ. ನಗದು ಹಾಗೂ 3 ಲಕ್ಷ ರೂ. ಬೆಲೆಯ ಟಾಟಾ ಏಸ್ ವಾಹನ ಮತ್ತು ನಕಲಿ ಬಂಗಾರ ವಶಕ್ಕೆ ಪಡೆದಿದ್ದಾರೆ.
ಬಂಧಿತರು ಹಳೇ ಕಾಲದ ಬಂಗಾರದ ನಾಣ್ಯ ತಮಗೆ ಸಿಕ್ಕಿದೆ. ಅದನ್ನು ಕಡಿಮೆ ಬೆಲೆಗೆ ನೀಡುತ್ತೇವೆ ಎಂದು ಹೊಸದುರ್ಗದ ಹುಣಸೇಕಟ್ಟೆಯ ಸತೀಶ್ ಮತ್ತು ಕಡೂರು ತಾಲೂಕಿನ ಭೈರಗೊಂಡನಹಳ್ಳಿಯ ಮಂಜು ಎಂಬುವವರು ನಿತ್ಯಾನಂದ ಎಂಬುವರನ್ನು ನಂಬಿಸಿ, ಅವರ ಬಳಿ ಇದ್ದ 1.30 ಲಕ್ಷ ರೂ. ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ನಿತ್ಯಾನಂದ ಈ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಅಪರಾಧಿಗಳ ಪತ್ತೆಗೆ ಎಎಸ್ಪಿ ಯತೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಬುಧವಾರ ತ್ಯಾಗರ್ತಿ ಕ್ರಾಸ್ ಬಳಿ ಅನುಮಾನಸ್ಪದವಾಗಿ ಕಂಡು ಬಂದ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ನಕಲಿ ಬಂಗಾರದ ನಾಣ್ಯ ನೀಡುತ್ತಿರುವ ವಿಷಯ ಬೆಳಕಿಗೆ ಬಂದಿದ್ದು, ನಿತ್ಯಾನಂದ ಅವರಿಂದ ಕಿತ್ತುಕೊಂಡಿದ್ದ ಹಣದ ಬಗ್ಗೆ ಸಹ ಬಾಯಿ ಬಿಟ್ಟಿದ್ದಾರೆ.
ಗ್ರಾಮಾಂತರ ಠಾಣೆ ಸಿಪಿಐ ಸುನೀಲ್‌ಕುಮಾರ್, ಪಿಎಸ್‌ಐಗಳಾದ ಭರತ್ ಕುಮಾರ್, ಸುಜಾತಾ, ಸಂತೋಷ್ ಭಾಗೋಜಿ, ಸಿಬ್ಬಂದಿ ಫೈರೋಜ್ ಅಹಮದ್, ಪರಶುರಾಮ್, ಗಿರೀಶ್, ಶಿವನಗೌಡ, ಸಂದೀಪ್‌ಕುಮಾರ್, ಗಿರೀಶ್ ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
Sagara Rural Station police arrest a gang which used to lure people of selling old gold coins. Two have been arrested near Tyagarthi Cross.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200