SHIVAMOGGA LIVE NEWS, 17 JANUARY 2025
ಸಾಗರ : ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿದವರೊಂದಿಗೆ ಶಾಮೀಲಾಗಿರುವ ಆರೋಪದ ಮೇರೆಗೆ ಉಳ್ಳೂರು ಉಪವಲಯ ಅರಣ್ಯಾಧಿಕಾರಿ ಸುಂದರಮೂರ್ತಿ, ಗಸ್ತು ಅರಣ್ಯ ಪಾಲಕ ಪ್ರವೀಣ್ ಕುಮಾರ್ ಅವರನ್ನು ಅಮಾನುತು (Suspended) ಮಾಡಲಾಗಿದೆ.
ತಾಲ್ಲೂಕಿನ ಕಾಸ್ಪಾಡಿ ಗ್ರಾಮದ ಸ.ನಂ.4 ರಲ್ಲಿರುವ ಮಳಲಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳ ಕಡಿತಲೆ ಮಾಡಲಾಗಿತ್ತು. ಉಳ್ಳೂರಿನ ಪ್ರೀತಮ್ ಗೌಡ ಎಂಬುವವರು ಸಾಗುವಾನಿ ಮರಗಳ ಅಕ್ರಮ ಕಡಿತಲೆಯಲ್ಲಿ ಭಾಗಿಯಾಗಿದ್ದು, ಅವರ ಕಾನೂನು ಬಾಹಿರ ಕೃತ್ಯಕ್ಕೆ ಸುಂದರ ಮೂರ್ತಿ, ಪ್ರವೀಣ್ ಕುಮಾರ್ ಸಹಕರಿಸಿರುವುದು, ಪ್ರೀತಮ್ ಗೌಡ ಜತೆ ಫೋನ್‌ನಲ್ಲಿ ನಡೆಸಿದ ಸಂಭಾಷಣೆಯಿಂದ ಸಾಬೀತಾಗಿದೆ ಎಂದು ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ » ‘ಸಹನೆಗು ಮಿತಿ ಇದೆ’, ವಾರ್ನಿಂಗ್ ನೀಡಿದ ಶಾಸಕ, ಕಾಂಗ್ರೆಸ್ ಚಿಹ್ನೆ ಬದಲಿಗೆ ಕಾರಣ ತಿಳಿಸಿದ ಸಂಸದ