ಬೆಂಗಳೂರು ಆಸ್ಪತ್ರೆಯಲ್ಲಿ ಸಾಗರದ ಮಾಜಿ ಎಂಎಲ್‌ಎ ನಿಧನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 3 JUNE 2023

SAGARA : ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಾಗರ ಕ್ಷೇತ್ರದ ಮಾಜಿ ಶಾಸಕ (Former MLA) ಬಿ.ಧರ್ಮಪ್ಪ ಕೊನೆಯುಸಿರೆಳೆದಿದ್ದಾರೆ. 1985ರಲ್ಲಿ ಜನತಾ ಪಕ್ಷದಿಂದ ಅವರು ಸಾಗರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು.

-Sagara-Former-MLA-B-Dharmappa-No-More

ವಯೋ ಸಹಜ ಅನಾರೋಗ್ಯದ ಹಿನ್ನೆಲೆ ಬಿ.ಧರ್ಮಪ್ಪ ಅವರು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಧರ್ಮಪ್ಪ ಅವರು ನಿಧನರಾಗಿದ್ದಾರೆ. ಪತ್ನಿ ಸುನಂದಮ್ಮ, ಪುತ್ರ ಸಂತೋಷ್‌, ಪುತ್ರಿ ರೂಪಾ ಇದ್ದಾರೆ. ಮೃತರ ಅಂತ್ಯಕ್ರಿಯ ಸ್ವಗ್ರಾಮ ತಂಗಳವಾಡಿಯಲ್ಲಿ ಇವತ್ತು ನಡೆಯಲಿದೆ.

ಗೊತ್ತಿರಬೇಕಾದ ಮೂರು ವಿಚಾರಗಳು

ವಿಚಾರ 1 – ಕಾನೂನು ಪದವಿಧರರಾಗಿದ್ದ ಧರ್ಮಪ್ಪ ಅವರು 1972 ರಿಂದ 1977ರವರೆಗೆ ಸೋಷಿಯಲಿಸ್ಟ್‌ ಪಾರ್ಟಿ ತಾಲೂಕು ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ್ದರು. 1985ರಲ್ಲಿ ಸಾಗರ ಕ್ಷೇತ್ರದ ಶಾಸಕರಾದರು.


WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ


ವಿಚಾರ 2 – ಸ್ನೇಹಮಯಿ, ಹಾಸ್ಯ ಚಟಾಕಿಗಳಿಂದಾಗಿ ಜನರಿಗೆ ಹತ್ತಿರವಾಗಿದ್ದರು. ಸಾಗರ ನಗರದ ನೀರಿನ ಮೂಲವಾಗಿರುವ ಬಸವನಹೊಳೆ ಡ್ಯಾಂ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಧರ್ಮಪ್ಪ ಅವರು ಆದ್ಯತೆ ನೀಡಿದ್ದರು.

ವಿಚಾರ 3 – ಮಾಜಿ ಶಾಸಕ ಎಂಬ ಹಮ್ಮು, ಬಿಮ್ಮು ತೋರದೆ ಸ್ಕೂಟರ್‌ನಲ್ಲಿಯೆ ಓಡಾಡುತ್ತಿದ್ದರು. ಸಾಗರದಲ್ಲಿ ಯಾರೆ ಸಿಕ್ಕರು ಸಾಮಾನ್ಯನಂತೆ ನಿಂತು ಮಾತನಾಡುತ್ತಿದ್ದರು. 40 ವರ್ಷದಿಂದ ಧರ್ಮಪ್ಪ ಅವರು ಸ್ಕೂಟರ್‌ನಲಿಯೇ ಪ್ರಯಾಣ ಮಾಡುತ್ತಿದ್ದರು.

ಇದನ್ನೂ ಓದಿ – ಶಿವಮೊಗ್ಗದ ವಿವಿಧ ಪೊಲೀಸ್‌ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ವರ್ಗಾವಣೆ, ಯಾವ್ಯಾವ ಠಾಣೆಯ ಇನ್ಸ್‌ಪೆಕ್ಟರ್‌ಗಳು ಬದಲಾಗಿದ್ದಾರೆ?

ಬಿ.ಧರ್ಮಪ್ಪ ಅವರ ನಿಧನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ, ಡಾ. ರಾಜನಂದಿನಿ ಕಾಗೋಡು, ಚೇತನ್‌ ರಾವ್‌ ಕಣ್ಣೂರು, ಆರ್ಯ ಈಡಿಗ ಸಂಘ, ವಕೀಲರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಸಂತಾಪ ಸೂಚಿಸಿವೆ.

Shimoga Live promotion

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment