ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 12 ಮಾರ್ಚ್ 2022
ಕೆರೆ ಹಬ್ಬದ ಅಂಗವಾಗಿ ಇವತ್ತು ಸಾಗರದ ಗಣಪತಿ ಕೆರೆಯ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯ ಸ್ವಯಂ ಸೇವಕರು ಸ್ವಚ್ಛತೆಯಲ್ಲಿ ಭಾಗವಹಿಸಿದ್ದರು.
ಗಣಪತಿ ಕೆರೆಯ ದಂಡೆಯನ್ನು ಜನರು ಸ್ವಚ್ಛಗೊಳಿಸಿದರು. ವಿವಿಧ ಸಂಘಟನೆಗಳು, ನಗರ ಸಭೆಯ ಪೌರ ಕಾರ್ಮಿಕರು, ಜನರು ಸ್ವಯಂ ಪ್ರೇರಿತವಾಗಿ ಬಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದರು.
ಕಸ ತೆಗೆದು ಮಾದರಿಯಾದ ಶಾಸಕ
ಸ್ವಯಂ ಸೇವಕರೊಂದಿಗೆ ಕೈ ಜೋಡಿಸಿದ ಶಾಸಕ ಹರತಾಳು ಹಾಲಪ್ಪ, ತಾವೆ ಕಸ ತೆಗೆದು ಉಳಿದವರಿಗೆ ಮಾದರಿಯಾದರು. ಈ ವೇಳೆ ಮಾತನಾಡಿದ ಶಾಸಕ ಹರತಾಳು ಹಾಲಪ್ಪ ಅವರು, ‘ಎರಡು ವರ್ಷದಿಂದ ಕೆರೆ ಹಬ್ಬ ನಡೆಸುತ್ತಿದ್ದೇವೆ. ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವುದು, ಪ್ಲಾಸ್ಟಿಕ್ ಮುಕ್ತಗೊಳಿಸುವುದು ಕೆರೆ ಹಬ್ಬದ ಉದ್ದೇಶ. ಬೆಳಗ್ಗೆ ಕೆರೆ ಸ್ವಚ್ಛತೆ ಮಾಡುತ್ತೇವೆ. ಸಂಜೆ ವೇಳೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ ಮೇಳ, ಕಬಡಿ ಪಂದ್ಯಾವಳಿ ಇರಲಿದೆ’ ಎಂದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
LATEST NEWS
- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

- ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ | 20 ಮಾರ್ಚ್ 2026 | ಅಡಿಕೆ ಧಾರಣೆ

- ಕಾರು, ಬೈಕ್ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

- ಉಷಾ ನರ್ಸಿಂಗ್ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು
















