ಟೈಲ್ಸ್ ಸಾಗಿಸುತ್ತಿದ್ದ ಗೂಡ್ಸ್ ವಾಹನ ಪಲ್ಟಿ, ವಾಹನದ ಹಿಂಬದಿಯಲ್ಲಿದ್ದ ಯುವಕ ದುರ್ಮರಣ, ಆಗಿದ್ದೇನು?

ಸಾಗರ: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿಯಾಗಿದ್ದು, ವಾಹನದ ಹಿಂಬದಿಯಲ್ಲಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೆಂಗಳೂರು – ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಬಳೆಗಾರು ಗ್ರಾಮದ ಬಳಿ ಘಟನೆ ನಡೆದಿದೆ.

ಸಾಗರ ತಾಲೂಕಿನ ಬಳಸಗೋಡು ಸಮೀಪದ ಬನಾದಕೊಪ್ಪದ ರಾಕೇಶ್ (26) ಮೃತ ದುರ್ದೈವಿ. ಸಾಗರದಿಂದ ತಾಳಗುಪ್ಪ ಕಡೆಗೆ ಟೈಲ್ಸ್ ಕೊಂಡೊಯ್ಯುತ್ತಿದ್ದ ಗೂಡ್ಸ್ ವಾಹನವು ಬಳೆಗಾರು ಬಳಿ ಬರುತ್ತಿದ್ದಂತೆ ಪಲ್ಟಿಯಾಗಿದೆ. ಈ ವೇಳೆ ವಾಹನದ ಹಿಂಬದಿ ಕುಳಿತಿದ್ದ ರಾಕೇಶ್ ಮೇಲೆಯೇ ಟೈಲ್ಸ್ ಬಾಕ್ಸ್‌ಗಳು ಬಿದ್ದಿವೆ.

fatal-goods-vehicle-accident-happen-near-Balegaru-village-in-Sagara-taluk

ರಾಕೇಶ್‌ ತಲೆ ಹಾಗೂ ಎದೆ ಭಾಗದ ಮೇಲೆ ಟೈಲ್ಸ್ ಬಾಕ್ಸ್‌ನ ಬಿದ್ದು ತೀವ್ರ ಪೆಟ್ಟಾಗಿದ್ದು ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾರೆ. ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ