ಶಿವಮೊಗ್ಗ ಲೈವ್.ಕಾಂ | SAGARA NEWS | 14 ಜುಲೈ 2021
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಎರಡನೆ ಡೋಸ್ ಲಸಿಕೆ ಸಿಗದಿರುವ ಕುರಿತು ಸಾಗರ ಶಾಸಕ ಹರತಾಳು ಹಾಲಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಕಾಗೋಡು ತಿಮ್ಮಪ್ಪ ಅವರಿಗೆ ಲಸಿಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಾಸಕ ಹಾಲಪ್ಪ ಹೇಳಿದ್ದೇನು?
ನಿನ್ನೆ ನೂರು ಡೋಸ್ ಲಸಿಕೆ ಇತ್ತು. ಆದರೆ ಕಾಗೋಡು ತಿಮ್ಮಪ್ಪ ಅವರು ಕೇಂದ್ರಕ್ಕೆ ಹೋದಾಗ ಲಸಿಕೆ ಖಾಲಿಯಾಗಿದೆ. ಸಾಮಾನ್ಯವಾಗಿ ಅವರು ಫೋನ್ ಮಾಡಿ ಹೋಗುತ್ತಿದ್ದರು. ನಿನ್ನೆ ಅವರು ಕರೆ ಮಾಡಿರಲಿಲ್ಲ.
ಕಾಗೋಡು ತಿಮ್ಮಪ್ಪ ಅವರು ಹಿರಿಯರು, ನಮಗೆಲ್ಲ ಮಾರ್ಗದರ್ಶಕರು. ಆದರೆ ಈವರೆಗೆ ಅವರು ಯಾಕೆ ಲಸಿಕೆ ಹಾಕಿಸಿಕೊಂಡಿಲ್ಲ ಅನ್ನುವುದು ಗೊತ್ತಾಗುತ್ತಿಲ್ಲ.
ಇದನ್ನೂ ಓದಿ | ಮಾಜಿ ಸಚಿವರಿಗೂ ತಟ್ಟಿತು ಕರೋನ ವ್ಯಾಕ್ಸಿನ್ ಅಭಾವದ ಬಿಸಿ
ಕಾಗೋಡು ತಿಮ್ಮಪ್ಪ ಅವರ ಬೀಗರು, ಮಗಳು, ಅಳಿಯ, ಮೊಮ್ಮಕ್ಕಳು ಎಲ್ಲರೂ ಡಾಕ್ಟರ್‍ಗಳಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ವಿಚಾರದಲ್ಲಿ ಅವರಾರೂ ಇವರಿಗೆ ಸಲಹೆ ಕೊಡಲಿಲ್ಲವೊ ಏನೋ. ಯಾಕಿಷ್ಟು ಲೇಟಾಗಿ ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ ಗೊತ್ತಿಲ್ಲ.
ಕಾಗೋಡು ತಿಮ್ಮಪ್ಪ ಅವರಿಗೆ ಈಗ ಲಸಿಕೆಯ ವ್ಯವಸ್ಥೆ ಮಾಡಿದ್ದೇವೆ. ಅವರಿಗೆ ಈಗ ಲಸಿಕೆ ಕೊಡಲಾಗುತ್ತಿದೆ.
ಗ್ರಾಮಾಂತರಕ್ಕೆ ಇಂತಿಷ್ಟು, ಪಟ್ಟಣಕ್ಕೆ ಇಂತಿಷ್ಟು ಎಂದು ಲಸಿಕೆ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಜನಕ್ಕೆ ಬೇಕಾದಷ್ಟು ಲಸಿಕೆ ಸಿಗುತ್ತಿಲ್ಲ. ಯಾಕೆಂದರೆ ಅಷ್ಟು ಲಸಿಕೆ ಉತ್ಪಾದನೆ ಆಗುತ್ತಿಲ್ಲ. ಪ್ರಾರಂಭದಲ್ಲಿ ಅಪಸ್ವರಗಳಿದ್ದಿದ್ದರಿಂದ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕಿದ್ದರು. ಈಗ ಎಲ್ಲರೂ ಬಂದು ತೆಗೆದುಕೊಳ್ಳುತ್ತಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200