SHIVAMOGGA LIVE NEWS, 18 JANUARY 2025
ಸಾಗರ : ಗಣಪತಿ ಕೆರೆ (Ganapathi kere) ದಂಡೆ ಮೇಲೆ ನಡೆಯುತ್ತಿರುವ ಕಾಮಗಾರಿಯನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಪರಿಶೀಲಿಸಿದರು. ಈ ಸಂದರ್ಭ ಕಾಮಗಾರಿ ಆರಂಭದಲ್ಲಿ ಬಳಕೆಯಾದ ಇಂಟರ್‌ಲಾಕ್ ಟೈಲ್ಸ್ ಬದಲು ಬೇರೊಂದು ಟೈಲ್ಸ್ ಬಳಸಿರುವುದಕ್ಕ ಹಾಲಪ್ಪ ಆಕ್ಷೇಪ ವ್ಯಕ್ತಪಡಿಸಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಹಾಲಪ್ಪ ಏನೆಲ್ಲ ಹೇಳಿದರು?
ನಮ್ಮ ಆಡಳಿತಾವಧಿಯಲ್ಲಿ ಗಣಪತಿ ಕೆರೆ ದಂಡೆ ಮೇಲೆ ಬಣ್ಣ ಮಿಶ್ರಿತ ಇಂಟರ್‌ಲಾಕ್ ಟೈಲ್ಸ್ ಅಳವಡಿಸಿ ರಸ್ತೆ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಇದಕ್ಕಾಗಿ ನಗರಸಭೆಯಿಂದ 32 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಲಾಗಿತ್ತು. ಆದರೆ ಈಗ ಕಡಿಮೆ ಗುಣಮಟ್ಟದ ಟೈಲ್ಸ್ ಬಳಸಲಾಗಿದೆ ಎಂಬ ಆರೋಪವಿದೆ ಎಂದು ಹಾಲಪ್ಪ ತಿಳಿಸಿದರು.
ಮೂಲ ಯೋಜನೆಯಂತೆ ಬಣ್ಣ ಮಿಶ್ರಿತ ಲಾಕಿಂಗ್ ಟೈಲ್ಸ್ ಬಳಸಿ ರಸ್ತೆ ನಿರ್ಮಿಸಬೇಕು. ಸಹಾಯಕ ಆಯುಕ್ತರು, ನಗರಸಭೆ ಕಮಿಷನರ್ ಅವರು ಪರಿಶೀಲನೆ ನಡೆಸಿ ಕ್ರಮ ವಹಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವುದಾಗಿ ಹಾಲಪ್ಪ ಎಚ್ಚರಿಸಿದರು.
ತಮ್ಮ ಅವಧಿಯಲ್ಲಿ ಗಣಪತಿ ಕೆರೆ ಸ್ವಚ್ಛತೆಗೆ ನಗರಸಭೆಯ ಹಣ ಬಳಸಿರುವುದಾಗಿ ಸುದ್ದಿ ಬಿತ್ತಿರಸಲಾಗುತ್ತಿದೆ. ಆದರೆ ಸ್ವಚ್ಛತಾ ಕಾರ್ಯಕ್ಕೆ ನಗರಸಭೆಯಿಂದ ನಯಾಪೈಸೆ ಹಣವನ್ನು ಬಳಸಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಮಧುರಾ ಶಿವಾನಂದ್, ವಿ.ಮಹೇಶ್, ಗಣೇಶ್ ಪ್ರಸಾದ್, ಸವಿತಾ ವಾಸು, ಪ್ರೇಮ್ ಸಿಂಗ್, ಕೆ.ಎಸ್.ಪ್ರಶಾಂತ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ » ಕಾಗೋಡು ತಿಮ್ಮಪ್ಪಗೆ ಒಂದೇ ದಿನ ಎರಡು ವಿವಿಯಿಂದ ಎರಡು ಗೌರವ ಡಾಕ್ಟರೇಟ್ ಪ್ರದಾನ