ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 MAY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SAGARA : ನೀರಿನ ಮಟ್ಟ ಇಳಿಕೆಯಾದ ಹಿನ್ನೆಲೆ ಶರಾವತಿ ಹಿನ್ನೀರು ಭಾಗದ ಹಸಿರುಮಕ್ಕಿ ಲಾಂಚ್ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಳೆ ಕೊರತೆ ಮತ್ತು ಭಾರಿ ಬಿಸಿಲಿನ ಪರಿಣಾಮ ಶರಾವತಿ ನದಿಯಲ್ಲಿ ನೀರಿನ ಮಟ್ಟ ತಗ್ಗಿದೆ.
ನೀರಿನ ಆಳದಲ್ಲಿದ್ದ ಮರದ ದಿಮ್ಮಿಗಳು ಮೇಲೆ ಬರುತ್ತಿವೆ. ಇವು ಲಾಂಚ್‌ಗೆ ತಾಗಿ ಹಾನಿ ಉಂಟು ಮಾಡಲಿವೆ. ಈ ಹಿನ್ನೆಲೆ ಲಾಂಚ್ ಸೇವೆ ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸಲಾಗಿದೆ. ಮಳೆ ಬಂದು ನೀರಿನ ಮಟ್ಟ ಹೆಚ್ಚಳವಾಗುವವರೆಗೆ ಹಸಿರುಮಕ್ಕಿ ಲಾಂಚ್ ಸೇವೆ ಇರುವುದಿಲ್ಲ. ಕಳೆದ ಒಂದು ವಾರದಿಂದ ಲಾಂಚ್‌ನಲ್ಲಿ ಜನರ ಜೊತೆಗೆ ಲಘು ಮತ್ತು ದ್ವಿಚಕ್ರ ವಾಹನಗಳನ್ನು ಮಾತ್ರ ದಾಟಿಸಲಾಗುತ್ತಿತ್ತು. ಈಗ ಲಾಂಚ್ ಸೇವೆ ಸಂಪೂರ್ಣಗ ಸ್ಥಗಿತವಾಗಿದೆ.
ಸುತ್ತಿ ಬಳಸಿ ಸಾಗರ ತಲುಪಬೇಕಿದೆ
ಹಸಿರುಮಕ್ಕಿ ಲಾಂಚ್ ಸೇವೆ ತಾತ್ಕಾಲಿಕ ಸ್ಥಗಿತದಿಂದ ಸಾಗರದಿಂದ ದಕ್ಷಿಣ ಕನ್ನಡದ ಪ್ರಮುಖ ಮಾರ್ಗ ಬಂದ್ ಆದಂತಾಗಿದೆ. ಈಗ ದಕ್ಷಿಣ ಕನ್ನಡದಿಂದ ಸಾಗರಕ್ಕೆ ಬರುವವರು ನಗರ, ಹೊಸನಗರ ಮಾರ್ಗವಾಗಿ ಸಾಗರಕ್ಕೆ ತಲುಪಬೇಕಾಗಿದೆ. ಇನ್ನು, ಹೊಸನಗರ ತಾಲೂಕಿನ ನಿಟ್ಟೂರು, ಸಂಪೆಕಟ್ಟೆ, ಕೊಲ್ಲೂರು ಭಾಗದ ಜನರ ಓಡಾಟಕ್ಕೂ ಅಡಚಣೆಯಾಗಿದೆ. ಈ ಭಾಗದ ನಿವಾಸಿಗಳು ಸಾಗರ ತಲುಪಲು 40 ಕಿ.ಮೀ ಸುತ್ತಿ ಬಳಸಿ ತೆರಳಬೇಕಿದೆ.
ತಿಂಗಳು ಮೊದಲೆ ಸೇವೆ ಸ್ಥಗಿತ
ಸಾಮನ್ಯವಾಗಿ ಮೇ ತಿಂಗಳ ಕೊನೆ ಅಥವಾ ಜೂನ್ ತಿಂಗಳಲ್ಲಿ ಹಸಿರುಮಕ್ಕಿ ಲಾಂಚ್ ಸೇವೆ ಸ್ಥಗಿತವಾಗುತ್ತಿತ್ತು. ಆದರೆ ತೀವ್ರ ಮಳೆ ಕೊರೆತೆಯ ಪರಿಣಾಮ ಈ ಬಾರಿ ಒಂದು ಒಂದು ತಿಂಗಳು ಮೊದಲೇ ಲಾಂಚ್ ಸಂಚಾರ ನಿಲ್ಲಿಸಿದೆ. ಮಳೆ ಆರಂಭವಾಗಿ, ಶರಾವತಿ ಹಿನ್ನೀರಿನ ಮಟ್ಟ ಏರಿಕೆಯಾದರಷ್ಟೆ ಲಾಂಚ್ ಸೇವೆ ಪುನಾರಂಭವಾಗಲಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಡೀ ದಿನದ ಹವಾಮಾನ ವರದಿ