ಶಿವಮೊಗ್ಗ ಲೈವ್.ಕಾಂ | SAGARA | 12 ಜನವರಿ 2020
ಮಂಗನ ಕಾಯಿಲೆ(ಕೆಎಫ್‌ಡಿ)ಯಿಂದ ಬಳಲುತ್ತಿದ್ದ ತುಮರಿ ಗ್ರಾಪಂ ವ್ಯಾಪ್ತಿ ಸೀಗೆಮಕ್ಕಿಯ ಮಹಿಳೆಯೊಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಇದು ಈ ವರ್ಷ ಕೆಎಫ್‌ಡಿ ಪಡೆದ ಮೊದಲ ಬಲಿ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹೂವಮ್ಮ (58) ಮೃತರು. ಗುರುವಾರ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದ ಹೂವಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಸೇರಿಸಲಾಗಿತ್ತು. ನಾಲ್ಕು ತಿಂಗಳಿಂದ ಇದುವರೆಗೆ 69 ಮಂಗಗಳು ಮೃತಪಟ್ಟಿವೆ. ಆದರೆ ಯಾವುದೇ ಮಂಗದಲ್ಲಿ ಕೆಎಫ್‌ಡಿ ಸೋಂಕು ಕಂಡುಬಂದಿಲ್ಲ.
ಹೂವಮ್ಮಗೆ ಇತರ ಆರೋಗ್ಯದ ಸಮಸ್ಯೆಗಳಿದ್ದವು. ಮಂಗನ ಕಾಯಿಲೆ ದೃಢಪಟ್ಟಿತ್ತಲ್ಲದೇ ಅವರು ರೋಗನಿರೋಧಕ ಚುಚ್ಚುಮದ್ದು ಪಡೆದುಕೊಂಡಿರಲಿಲ್ಲ ಎಂದು ಸಾಗರ ಟಿಎಚ್‌ಒ ಡಾ. ಮುನಿವೆಂಕಟರಾಜು ತಿಳಿಸಿದ್ದಾರೆ.
ಹೂವಮ್ಮ ಮತ್ತು ಅವರ ಪತಿ ತಿಮ್ಮಾನಾಯ್ಕ ಹೊರತುಪಡಿಸಿ ಕುಟುಂಬಸ್ಥರೆಲ್ಲರೂ ಚುಚ್ಚುಮದ್ದು ಪಡೆದಿದ್ದು ಆರೋಗ್ಯವಾಗಿದ್ದಾರೆ. ತಿಮ್ಮಾನಾಯ್ಕ ಅವರಿಗೂ ತುರ್ತಾಗಿ ಚುಚ್ಚುಮದ್ದು ಪಡೆಯಲು ಸೂಚಿಸಿದ್ದೇವೆ. ಮತ್ತೊಬ್ಬ ಮಂಗನ ಕಾಯಿಲೆ ಸಂತ್ರಸ್ತ ಐಟಿಐ ವಿದ್ಯಾರ್ಥಿ ಭರತ್ ಸಾಗರ ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
women dies of KFD in Sagara taluk. This is the first death case reported in Shimoga For KFD. Around 69 Monkeys died in the vicinity of Tumari Grama Panchayath.