ಸಾಗರ : ನಕಲಿ ದಾಖಲೆ ಸೃಷ್ಟಿ ಸರ್ಕಾರಿ ಜಮೀನು (Land Mafia) ಕಬಳಿಸುವ ಬೆಂಗಳೂರಿನ ಕಾಯಿಲೆ ಸಾಗರಕ್ಕು ಕಾಲಿಟ್ಟಿದೆ. ಆದರೆ ಕಮಿಷನ್ ಹಂಚಿಕೆಯಲ್ಲಿ ಉಂಟಾದ ವ್ಯತ್ಯಾಸದಿಂದ ಪ್ರಕರಣಗಳು ಬೆಳಕಿಗೆ ಬರುತ್ತಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರತಾಳು ಹಾಲಪ್ಪ, ಅಧಿಕಾರದಲ್ಲಿರುವ ರಾಜಕಾರಣಿಗಳು, ಅವರ ಹಿಂಬಾಲಕರು, ಅಧಿಕಾರಿಗಳು ಸೇರಿ ನಕಲಿ ದಾಖಲೆ ಸೃಷ್ಟಿ ಜಮೀನು ಮಾರಾಟ ಮಾಡುತ್ತಿದ್ದಾರೆ. ಆದರೆ ಕಮಿಷನ್ ಹಂಚಿಕೆ ವೇಳೆ ವ್ಯತ್ಯಾಸವಾಗಿದೆ. ಈ ಸಂಬಂಧ ಬುಧವಾರ ಸಣ್ಣಪುಟ್ಟ ಗಲಾಟೆಯು ಆಗಿದೆ ಎಂದು ಆರೋಪಿಸಿದರು.
ಎಲ್ಲೆಲ್ಲಿ ಭೂ ಕಬಳಿಕೆ ಆಗಿದೆ?
ಸಾಗರ ನಗರ ಸಮೀಪದ ಮಂಕೋಡು ಗ್ರಾಮದಲ್ಲಿ 16 ಎಕರೆ, ಬಿಳಿಸಿರಿಯ ಹೊಳಗೋಡಿನಲ್ಲಿ 10 ಎಕರೆ, ಮಳ್ಳ ಗ್ರಾಮದಲ್ಲಿ 6 ಎಕರೆ, ಬಳಸಗೋಡು ಗ್ರಾಮದಲ್ಲಿ 23 ಎಕರೆ ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಮಂಕೋಡು ಗ್ರಾಮದ ಜಮೀನಿನಲ್ಲಿ ಬಹುಪಾಲು ಮಾರಾಟ ಮಾಡಲಾಗಿದೆ. ಇತ್ತ ಬಳಸಗೋಡು ಗ್ರಾಮದಲ್ಲಿನ ಜಮೀನನ್ನು ತಾವು ಶಾಸಕರಾಗಿದ್ದಾಗ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಜಾಗ ಮೀಸಲಿಡಲಾಗಿತ್ತು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೇವೇಂದ್ರಪ್ಪ ಯಲಕುಂದ್ಲಿ, ಗಣೇಶ್ ಪ್ರಸಾದ್, ಡಾ. ರಾಜನಂದಿನಿ ಕಾಗೋಡು, ರತ್ನಾಕರ ಹೊನಗೋಡು, ಟಿ.ಡಿ.ಮೇಘರಾಜ್ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ » ಗಾಜನೂರಿನಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಚಾಲಕನ ವಿರುದ್ಧ ಕೇಸ್ ದಾಖಲಿಸಿದ ಮೆಸ್ಕಾಂ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200